ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಮೇ 2020
ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿಯೆ ಸಾವನ್ನಪ್ಪಿದ್ದಾರೆ. ಇವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆ ಮೃತಪಟ್ಟಿದ್ದರೂ ಅವರ ಮಗಳು ಕಳೆದ ಐದು ದಿನದಿಂದ ಮೃತದೇಹದ ಜೊತೆಗೆ ಮನೆಯೊಳಗಿದ್ದದ್ದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ. ಅಲ್ಲದೆ ಸಾವಿನ ಕುರಿತು ಅನುಮಾನ ಮೂಡುವಂತೆ ಮಾಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ? ಹೇಗಾಯ್ತು ಘಟನೆ?
ನಿವೃತ್ತ ಶಿಕ್ಷಕಿ ರಾಜೇಶ್ವರಿ (64) ಮೃತರು. ಇವರು ಬಸವನಗುಡಿಯ 5ನೇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರು ಮೇ 13ರಂದು ಔಷಧಿ ಸೇವಿಸಿದ್ದಾರೆ. ಓವರ್ ಡೋಸೇಜ್‍ನಿಂದಲೋ ಅಥವಾ ಆರೋಗ್ಯ ಸಮಸ್ಯೆ ಉಲ್ಬಣಿಸಿಯೋ ರಾಜೇಶ್ವರಿ ಅವರು ಮನೆಯೊಳಗೆ ಮೃತಪಟ್ಟಿದ್ದಾರೆ. ಈ ವಿಚಾರ ಹೊರಗಿನವರಿಗೆ ತಿಳಿದಿರಲಿಲ್ಲ.
ಐದು ದಿನ ಶವದೊಂದಿಗೆ ಇದ್ದಾಳೆ ಮಗಳು
ರಾಜೇಶ್ವರಿ ಅವರು ಮೃತಪಟ್ಟಾಗ ಅವರ ಮಗಳು ಮನೆಯಲ್ಲಿಯೆ ಇದ್ದರು. ಸ್ನಾತಕೋತ್ತರ ಪದಿವೀಧರೆಯಾಗಿರುವ ಇವರು, ಐದು ದಿನ ತಾಯಿಯ ಶವದೊಂದಿಗೆ ಮನೆಯೊಳಗೆ ಇದ್ದರು. ಹೊರಗೆ ಬಂದು ಯಾರಿಗೂ ವಿಚಾರ ತಿಳಿಸಿಲ್ಲ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಮನೆ ಮಾಲೀಕರು ಮತ್ತು ಅಕ್ಕಪಕ್ಕದವರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಆಗ ರಾಜೇಶ್ವರಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸನಿಹದಲ್ಲೇ ಮಗಳು ಕುಳಿತಿರುವುದನ್ನು ಗಮನಿಸಿ ಆತಂಕಕ್ಕೀಡಾಗಿದ್ದಾರೆ. ಕೂಡಲೆ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಜೇಶ್ವರಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಗಳು ಮಾನಸಿಕ ಖಿನ್ನತೆಗೆ ಒಳಗಾದಂತೆ ಕಾಣುತ್ತಿದ್ದು, ಪೊಲೀಸರೆ ರಕ್ಷಣೆ ಒದಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹೆಚ್ಚಿನ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]