ಶಿವಮೊಗ್ಗ ಪೊಲೀಸ್‌ ಚೌಕಿಯಲ್ಲಿ ಆಟೋ ಇಳಿದ ಮೈಸೂರಿನ ಮಹಿಳೆಗೆ ಕಾದಿತ್ತು ಆಘಾತ

ಶಿವಮೊಗ್ಗ: ಬಸ್ ಪ್ರಯಾಣದ ವೇಳೆ ಮಹಿಳೆಯೊಬ್ಬರ ಬ್ಯಾಗ್‌ನಿಂದ ₹3.15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ. ➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮೈಸೂರಿನ ಪೊಲೀಸ್ ಲೇಔಟ್ ನಿವಾಸಿ ದಾಕ್ಷಾಯಿಣಿ (59) ಹಣ ಮತ್ತು ಒಡವೆ ಕಳೆದುಕೊಂಡವರು. ಮದುವೆ ಕಾರ್ಯಕ್ರಮಕ್ಕೆ ರಾಂಪುರಕ್ಕೆ ಆಗಮಿಸಿದ್ದ ದಾಕ್ಷಾಯಿಣಿ, ಸಾಸ್ವೆಹಳ್ಳಿಯಿಂದ ಹೊನ್ನಾಳಿ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಮಧ್ಯಾಹ್ನ ಶಿವಮೊಗ್ಗ ಬಸ್ ನಿಲ್ದಾಣದ ಸಿಗ್ನಲ್ ಬಳಿ ಇಳಿದು, ಅಲ್ಲಿಂದ ಆಟೋದಲ್ಲಿ ವಿನೋಬನಗರದ ಪೊಲೀಸ್ ಚೌಕಿ ಬಳಿ ತಲುಪಿದ್ದರು. ಆಟೋದಿಂದ ಬ್ಯಾಗ್ ಇಳಿಸಿ ಗಮನಿಸಿದಾಗ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

Vinobanagara-Police-Station-Shimoga

ಬ್ಯಾಗ್‌ನಲ್ಲಿದ್ದ 14 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ 5 ಜೊತೆ ಕಿವಿಯೋಲೆ, 9 ಗ್ರಾಂ ತೂಕದ ಎರಡು ಮಕ್ಕಳ ಬ್ರೇಸ್‌ಲೆಟ್, 6 ಗ್ರಾಂ ತೂಕದ ಪೆಂಡೆಂಟ್, ₹20 ಸಾವಿರ ನಗದು ಹಾಗೂ ಬ್ಯಾಂಕ್ ಲಾಕರ್ ಕೀ, ಎಟಿಎಂ ಕಾರ್ಡ್ ಸೇರಿದಂತೆ ಪ್ರಮುಖ ದಾಖಲಾತಿಗಳು ಕಳ್ಳತನವಾಗಿವೆ. ಬಸ್‌ನಲ್ಲಿ ಸೀಟಿನ ಕೆಳಗೆ ಬ್ಯಾಗ್ ಇಟ್ಟಿದ್ದ ಸಂದರ್ಭ ಕಳ್ಳರು ಕೃತ್ಯ ಎಸಗಿರಬೇಕು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!