ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಕೆಎಸ್ಆರ್ಟಿಸಿ ಬಸ್ನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಿಂದ ನೆಕ್ಲೇಸ್ (Necklace) ಕಳ್ಳತನ ಮಾಡಿದ್ದ ಆರೋಪ ಸಂಬಂಧ ಮಂಜುನಾಥ ಬಡಾವಣೆಯ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ. ಆಕೆಯಿಂದ ಲಕ್ಷಾಂತರ ಮೌಲ್ಯದ ಚನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಂಜುನಾಥ ಬಡಾವಣೆಯ ತಾಹಿರಾ ರೋಹಿ (32) ಬಂಧಿತಳು. 81.800 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ವ್ಯಾನಿಟಿ ಬ್ಯಾಗ್ನಿಂದ ನೆಕ್ಲೇಸ್ ಕದ್ದಿದ್ದಳು
ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ನಿಲ್ದಾಣದಿಂದ ಭದ್ರಾವತಿಗೆ ತೆರಳಲು ಮಹಿಳೆಯೊಬ್ಬರು ಬಸ್ ಹತ್ತಿದ್ದರು. ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ಗಮನಿಸಿದಾಗ ಜಿಪ್ ತೆರೆದುಕೊಂಡಿತ್ತು. ವ್ಯಾನಿಟಿ ಬ್ಯಾಗ್ನಲ್ಲಿದ್ದ ನೆಕ್ಲೇಸ್ ಕಳ್ಳತನವಾಗಿತ್ತು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಎಎಸ್ಐ ನಾಗರಾಜ್, ಸಿಬ್ಬಂದಿ ಪಾಲಾಕ್ಷ ನಾಯ್ಕ, ಲಚ್ಚಾ ನಾಯ್ಕ್, ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನಿತ್ ರಾವ್, ವಿಜಯ ಲಕ್ಷ್ಮಿ ಅವರನ್ನು ಒಳಗೊಂಡ ತಂಡ ಆರೋಪಿತಳನ್ನು ಬಂಧಿಸಿದೆ. ಎರಡು ಕಳ್ಳತನ ಪ್ರಕರಣ ಸಂಬಂಧ 5.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ ⇓
ಶಿವಮೊಗ್ಗ ಜಿಲ್ಲೆಗೆ ಇನ್ನು ನಾಲ್ಕು ದಿನ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ