ಮದುವೆಯಾಗಿ ಏಳು ತಿಂಗಳಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | HOSANAGARA NEWS | 26 JUNE 2021

ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ಏಳು ತಿಂಗಳಲ್ಲೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಹೊಸನಗರ ತಾಲೂಕು ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯ (21) ಮೃತಳು. ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸೌಂದರ್ಯಾಳ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಫೇಸ್‍ಬುಕ್‍ನಿಂದ ಪರಿಚಯ, ಪ್ರೇಮ, ಮದುವೆ

ಹಾಸನ ಜಿಲ್ಲೆ ಸಕಲೇಶಪುರದ ಬೆಳಗೋಡು ಬಳಿಯ ಗೋಳಗೊಂಡೆ ಗ್ರಾಮದ ಸೌಂದರ್ಯಗೂ, ಉಮೇಶ್‍ಗೂ ಫೇಸ್‍ಬುಕ್‍ನಲ್ಲಿ ಪರಿಚಯವಾಗಿತ್ತು. ಇಬ್ಬರು ಪ್ರೀತಿಸಿ, ಕುಟುಂಬದ ವಿರೋಧದ ನಡುವೆ 2020 ನವೆಂಬರ್‍ನಲ್ಲಿ ವಿವಾಹವಾಗಿದ್ದರು.

ಮದುವೆಯಾಗಿ ಏಳು ತಿಂಗಳಲ್ಲಿ ಸೌಂದರ್ಯ ಸಾವನ್ನಪ್ಪಿದ್ದಾಳೆ. ಇದು ಕೊಲೆ ಎಂದು ಸೌಂದರ್ಯಾಳ ಪೋಷಕರು ಆರೋಪಿಸಿದ್ದಾರೆ. ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಸಹೋದರಿ ರೂಪಾ ಕಿರುಕುಳ ನೀಡಿ ಹತ್ಯೆ ಮಾಡಿರುವುದಾಗಿ ಸೌಂದರ್ಯಾಳ ತಂದೆ ಉದಯ್ ಆರೋಪಿಸಿದ್ದಾರೆ.

ಇಬ್ಬರು ಮಕ್ಕಳ ದುರಂತ ಅಂತ್ಯ

ಒಂದೇ ತಿಂಗಳಲ್ಲಿ ಇಬ್ಬರು ಮಕ್ಕಳು ದುರಂತ ಅಂತ್ಯ ಕಂಡಿದ್ದು, ಉದಯ್ ಅವರ ಕುಟುಂಬಕ್ಕೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಜೂ.8ರಂದು ಉದಯ್ ಅವರ ಎರಡನೆ ಮಗಳು ಐಶ್ವರ್ಯ ಮೃತಪಟ್ಟಿದ್ದರು. ಆಳಿಯನೆ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿತ್ತು. ಈಗ ಮತ್ತೊಬ್ಬ ಮಗಳು ದುರಂತ ಅಂತ್ಯ ಕಂಡಿದ್ದಾಳೆ.

ತೀರ್ಥಹಳ್ಳಿ ಡಿವೈಎಸ್‍ಪಿ ಶಾಂತವೀರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಮಧುಸೂದನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

200513188 1141345859678656 2336811118303997815 n.jpg? nc cat=101&ccb=1 3& nc sid=730e14& nc ohc=hjta83CxAQoAX rrA 9&tn=XgSJ3kUX1No5RJvs& nc ht=scontent.fblr20 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment