ವಿದ್ಯಾನಗರ ಮೇಲ್ಸೇತುವೆ ಮುಂದೆ ಬೈಕ್‌ ಸವಾರನ ಮೇಲೆ ಹತ್ತಿದ ಲಾರಿ

 ಶಿವಮೊಗ್ಗ  LIVE 

 ಮುಖ್ಯಾಂಶ 

  • ವಿದ್ಯಾನಗರ ಮೇಲ್ಸೇತುವೆ ಬಳಿ ಭೀಕರ ಅಪಘಾತ; ಬೈಕ್ ಸವಾರ ಸಾವು.
  • ಲಾರಿ ಚಕ್ರದ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಚನ್ನಗಿರಿಯ ವ್ಯಕ್ತಿ.
  • ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ; ಮೆಗ್ಗಾನ್ ಆಸ್ಪತ್ರೆಗೆ ಮೃತದೇಹ ರವಾನೆ.

ಶಿವಮೊಗ್ಗ: ಲಾರಿ ಮತ್ತು ಬೈಕ್‌ ಅಪಘಾತ (Accident) ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ವಿದ್ಯಾನಗರದ ಮೇಲ್ಸೇತುವೆಯ ತಿರುವಿನಲ್ಲಿ ಘಟನೆ ಸಂಭವಿಸಿದೆ.

ಚನ್ನಗಿರಿ ತಾಲೂಕಿನ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಲಾರಿ ಮತ್ತು ಬೈಕ್‌ ಮೇಲ್ಸೇತುವೆಯಿಂದ ಒಟ್ಟಿಗೆ ಕೆಳಗೆ ಬಂದಿವೆ. ವಿದ್ಯಾನಗರದ ಕಡೆಗೆ ತಿರುವು ಪಡೆಯುವಾಗ ಲಾರಿಯ ಹಿಂಬದಿ ಚಕ್ರಗಳ ಅಡಿಗೆ ಬೈಕ್‌ ಸವಾರ ಸಿಲುಕಿದ್ದಾನೆ. ಆತನ ಮೇಲೆ ಲಾರಿ ಚಕ್ರಗಳು ಹರಿದಿದ್ದು, ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

Bike-and-Truck-mishap-near-vidyanagara-flyover

ಘಟನೆಯ ಮಾಹಿತಿ ತಿಳಿಯುತ್ತಿದ್ದಂಗೆ ಪೂರ್ವ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ » ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರು ನಜ್ಜುಗುಜ್ಜು, ಎಲ್ಲಿ? ಹೇಗಾಯ್ತು ಘಟನೆ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment