NEWS HIGHLIGHTS
ಶಿವಮೊಗ್ಗ: ವಿಮಾನ ಟಿಕೆಟ್ ಬುಕಿಂಗ್ ಮಾಡಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ₹11,09,000 ವಂಚಿಸಲಾಗಿದೆ.
ಉದ್ಯಮಿಯೊಬ್ಬರಿಗೆ ಪ್ರೈವೇಟ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ವಂಚನೆ ಎಸಗಲಾಗಿದೆ. ವಿಮಾನ ಟಿಕೆಟ್ ಬುಕಿಂಗ್ ನೀಡುವುದಾಗಿ ನಂಬಿಸಿ ಉದ್ಯಮಿಯ ವೈಯಕ್ತಿಕ ಮಾಹಿತಿಯನ್ನು ವಂಚಕರು ಪಡೆದುಕೊಂಡಿದ್ದರು. ನಂತರ ರಿಜಿಸ್ಟ್ರೇಷನ್ ಫೀ ಸೇರಿದಂತೆ ವಿವಿಧ ಕಾರಣಗಳನ್ನು ಹೇಳಿ ಜೂನ್ 17 ರಿಂದ ಜೂನ್ 20ರವರೆಗೆ ಹಂತ ಹಂತವಾಗಿ ಉದ್ಯಮಿ, ಅವರ ಪತ್ನಿ ಮತ್ತು ಪುತ್ರನ ಬ್ಯಾಂಕ್ ಖಾತೆಗಳಿಂದ ಒಟ್ಟು ₹11,09,000 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಕೊನೆಗೆ ಟಿಕೆಟ್ ನೀಡದೆ ಸಬೂಬು ಹೇಳಿದ್ದು, ಉದ್ಯಮಿಯು ಹಣ ವಾಪಸ್ ಕೇಳಿದಾಗ ಹೆಚ್ಚುವರಿ ಹಣ ನೀಡುವುದಾಗಿ ವಂಚಕರು ನಂಬಿಸಿದ್ದರು. ಆದೆರೆ ಹಣ ವಾಪಸ್ ಬಾರದ ಹಿನ್ನೆಲೆ ವಂಚನೆಗೊಳಗಾಗಿರುವುದು ಅರಿವಾಗಿದೆ. ಘಟನೆ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.