ರವೀಂದ್ರನಗರದ ಅಮ್ಮ, ಮಗಳ ಅಕೌಂಟ್’ನಿಂದ 88 ಸಾವಿರ ಮಂಗಮಾಯ, ಮಿಲಿಟರಿ ಆಫೀಸರ್ ಸೋಗಿನಲ್ಲಿ ಮಹಾಮೋಸ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 2 ಮಾರ್ಚ್ 2020

ಮಿಲಿಟರಿ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ಶಿವಮೊಗ್ಗ ರವೀಂದ್ರನಗರದ ಮಹಿಳೆ ಮತ್ತು ಅವರ ಮಗಳ ಖಾತೆಯಿಂದ ಆನ್’ಲೈನ್ ಮೂಲಕ 88 ಸಾವಿರ ರೂ. ಹಣ ಲಪಟಾಯಿಸಿದ್ದಾನೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

ಮನೆಯ ಕೆಲವು ವಸ್ತುಗಳನ್ನು ಮಾರಾಟ ಮಾಡಲು ರವೀಂದ್ರನಗರದ ಶ್ರೀನಾಥ್ ಎಂಬುವವರು OLXನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ, ಶ್ರೀನಾಥ್ ಅವರಿಗೆ ಕರೆ ಮಾಡಿ, ವಸ್ತುಗಳನ್ನು ಖರೀದಿಸುವುದಾಗಿ ತಿಳಿಸಿದ. 14 ಸಾವಿರ ರುಪಾಯಿಯನ್ನು ಅಕೌಂಟ್’ಗೆ ಟ್ರಾನ್ಸ್’ಫರ್ ಮಾಡುವುದಾಗಿ ನಂಬಿಸಿದ್ದ.

ನಾನು ಮಿಲಿಟರಿ ಆಫೀಸರ್

ಶ್ರೀನಾಥ್ ಅವರಿಗೆ ಕರೆ ಮಾಡಿದ ವ್ಯಕ್ತಿ ತನ್ನನ್ನು ಮಿಲಿಟರಿ ಅಧಿಕಾರಿ ಸಂಜಯ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದ. ಹಣ ವರ್ಗಾಯಿಸುವುದಾಗಿ ಭರವಸೆ ನೀಡಿದ್ದ. ಇದೇ ನಂಬಿಕೆ ಮೇಲೆ ಶ್ರೀನಾಥ್ ಅವರು ತಮ್ಮ ಹೆಂಡತಿ ಮತ್ತು ಮಗಳ ಖಾತೆಗೆ ಫೋನ್ ಪೇ ವಿವರ ನೀಡಿದ್ದರು.

ಖಾತೆಯಿಂದ ಹಣ ಮಂಗಮಾಯ

ಫೋನ್ ಪೇ ವಿವರ ಸಂಗ್ರಹಿಸಿದ್ದ ಸಂಜಯ್ ಸಿಂಗ್, ಶ್ರೀನಾಥ್ ಅವರ ಪತ್ನಿಯ ಖಾತೆಯಿಂದ 48 ಸಾವಿರ, ಮಗಳ ಅಕೌಂಟ್’ನಿಂದ 40 ಸಾವಿರ ರೂ. ಹಣವನ್ನು ಲಪಟಾಯಿಸಿದ್ದಾನೆ. ವಂಚನೆಯ ಅರಿವಾಗುತ್ತಿದ್ದಂತೆ, ಶ್ರೀನಾಥ್ ಅವರು ಜಯನಗರ ಠಾಣೆಗೆ ಬಂದು ದೂರು ನೀಡಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment