ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಹೆಚ್ಚಿನ ಲಾಭಾಂಶದ ಆಮಿಷ ಒಡ್ಡಿ ಆನ್‌ಲೈನ್ ಸ್ಟೋರ್ ತೆರೆಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಸುಮಾರು ₹52.93 ಲಕ್ಷ (investment) ದೋಚಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸೇಲ್ಸ್‌ಮನ್ ಒಬ್ಬರಿಗೆ ಪೂಜಾ ಗೌಡ ಹೆಸರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ wwishvipstore ಎಂಬ ವೆಬ್ ಲಿಂಕ್ ಕಳುಹಿಸಿದ್ದರು. ಈ ಲಿಂಕ್ ಮೂಲಕ ಆನ್‌ಲೈನ್ ಸ್ಟೋರ್ ಓಪನ್ ಮಾಡಿ, ಅದರಲ್ಲಿ ವಸ್ತುಗಳನ್ನು ಆರ್ಡರ್ ಮಾಡಿ ಪಿಕಪ್ ಮಾಡುವ ಕೆಲಸ ನೀಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಇದನ್ನು ನಂಬಿದ ಸೇಲ್ಸ್‌ಮನ್ ವಿವಿಧ ಹಂತಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ಆರಂಭದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಲಾಭ ಬಂದಂತೆ ತೋರಿಸಿದ್ದಾರೆ. ನಂತರ ಆ ಹಣವನ್ನು ವಿತ್‌ಡ್ರಾ ಮಾಡಲು ಹೋದಾಗ ತಾಂತ್ರಿಕ ಕಾರಣ ನೀಡಿ ತಡೆಹಿಡಿಯಲಾಗಿದೆ. ತೆರಿಗೆ ಹಾಗೂ ಪೆನಾಲ್ಟಿ ಹೆಸರಿನಲ್ಲಿ ಮತ್ತೆ ಹಣ ಹಾಕಿಸಿಕೊಂಡ ಆರೋಪಿಗಳು, ಒಟ್ಟು ₹52,93,646 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವಾಪಸ್ ಬರಬಹುದು ಎಂದು ಕಾಯುತ್ತಿದ್ದ ದೂರುದಾರರಿಗೆ ತಾವು ವಂಚನೆಗೆ ಒಳಗಾಗಿರುವುದು ತಡವಾಗಿ ಅರಿವಿಗೆ ಬಂದಿದೆ.
ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?


LATEST NEWS
- ಶಿವಮೊಗ್ಗದಲ್ಲಿ ಶೆಟ್ಟರ ಸಂತೆ, ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್, ಏನೇನೆಲ್ಲ ಸ್ಟಾಲ್ಗಳಿವೆ?

- ಸರ್ಕಾರಿ ಅಧಿಕಾರಿಗೆ ಜೈಲು ಶಿಕ್ಷೆ, ಏನಿದು ಪ್ರಕರಣ?

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? – ಇಂದಿನ ಅಡಿಕೆ ಧಾರಣೆ

- ಹೊಟೇಲ್ ಮಾಲೀಕನಿಂದ ಕೊಲೆ, ಕಾರಿನಲ್ಲಿ ಮೃತದೇಹ ಸಾಗಿಸುವಾಗ ಪೊಲೀಸ್ ಬಲೆಗೆ

- Acting Registrar Appointed for Kuvempu University

About The Editor
ನಿತಿನ್ ಆರ್.ಕೈದೊಟ್ಲು















