SHIVAMOGGA LIVE NEWS | 26 DECEMBER 2022
ಶಿವಮೊಗ್ಗ : ಪೊಲೀಸ್ ಅಧಿಕಾರಿಗಳಂತೆ ನಟಿಸಿ (fake police), ನಕಲಿ ಐಡಿ ಕಾರ್ಡ್ ತೋರಿಸಿ ಮಹಿಳೆಯೊಬ್ಬರನ್ನು ವಂಚಿಸಿ ನಡು ರಸ್ತೆಯಲ್ಲಿಯೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆ ಸಂಭವಿಸಿದೆ.
ವಿದ್ಯಾನಗರದ ಜಗದಾಂಬ ಬೀದಿಯ ಮೇರಿ ಜೋಸ್ಫಿನ್ ಎಂಬುವವರಿಂದ ಚಿನ್ನದ ಬಳೆ, ಚೈನ್ ಕದ್ದು ವಂಚಕರು ಪರಾರಿಯಾಗಿದ್ದಾರೆ.
ಸರ್ವೆ ಡ್ಯೂಟಿಗೆ ಬಂದ ಪೊಲಿಸರು..!
ಮೇರಿ ಜೋಸ್ಫಿನ್ ಅವರು ವಿದ್ಯಾನಗರದಲ್ಲಿರುವ ಬ್ಯಾಂಕಿಗೆ ತೆರಳುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಇವರ ಪಕ್ಕಕ್ಕೆ ಬಂದು ಬೈಕ್ ನಿಲ್ಲಿಸಿದ್ದಾರೆ. ತಾವು ಪೊಲೀಸರು (fake police), ಇಲ್ಲಿ ಸರ್ವೆ ಡ್ಯೂಟಿ ಮಾಡುತ್ತಿದ್ದೇವೆ ಎಂದು ಐಡಿ ಕಾರ್ಡ್ ತೋರಿಸಿ ಹಿಂದಿ ಭಾಷೆಯಲ್ಲಿ ಮಾತನಾಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದ ಯುವಕರು, ‘ಒಡವೆಗಳನ್ನು ಹಾಕಿಕೊಂಡು ಹೀಗೆಲ್ಲ ಓಡಾಡಬಾರದು. ಎಲ್ಲವನ್ನು ಈಗಲೆ ಬಿಚ್ಚಿ ಬ್ಯಾಗಿನಲ್ಲಿ ಹಾಕಿಕೊಳ್ಳಿ’ ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ – ಕಾರಲ್ಲಿ ಬಂದು ಬಾಲಕನ ಕಿಡ್ನಾಪ್, ಅಡಕೆ ವ್ಯಾಪಾರಿ ಸೇರಿ ಭದ್ರಾವತಿ, ಶಿವಮೊಗ್ಗ, ಸಾಗರದ ಐವರು ಅರೆಸ್ಟ್
ಮನೆಗೆ ಹೋಗಿ ಸರ, ಬಳೆ ಬಿಚ್ಚಿಡುತ್ತೇನೆ ಎಂದರು ಮೇರಿ ಜೋಸ್ಫಿನ್ ಅವರು ತಿಳಿಸಿದ್ದಾರೆ. ಅದರೆ ಯುವಕರು ಒತ್ತಾಯವಾಗಿ ಅವುಗಳನ್ನು ಬಿಚ್ಚಿಸಿ ತಮ್ಮ ಕೈಗೆ ಪಡೆದುಕೊಂಡಿದ್ದಾರೆ. ಅಲ್ಲದೆ ಅವುಗಳನ್ನು ಮೇರಿ ಜೋಸ್ಫಿನ್ ಅವರ ಬ್ಯಾಗಿಗೆ ಹಾಕುವವರಂತೆ ನಟಿಸಿ ಬೈಕ್ ಹತ್ತಿ ಪರಾರಿಯಾಗಿದ್ದಾರೆ.
ಬ್ಯಾಗ್ ಒಳಗೆ ನೋಡಿದಾಗ ಶಾಕ್
ಪೊಲೀಸ್ ಎಂದು ಹೇಳಿಕೊಂಡು ಬಂದಿದ್ದ ಯುವಕರು ತೆರಳುತ್ತಿದ್ದಂತೆ ಮೇರಿ ಜೋಸ್ಫಿನ್ ಅವರು ಬ್ಯಾಗ್ ಪರಿಶೀಲಿಸಿದ್ದಾರೆ. ಅದರೊಳಗೆ ಚಿನ್ನದ ಚೈನು, ಬಳೆಗಳು ಇರಲಿಲ್ಲ. ಗಾಬಾರಿಗೊಂಡ ಅವರು ಕೂಡಲೆ ತಮ್ಮೆ ಸೊಸೆಗೆ ವಿಚಾರ ತಿಳಿಸಿದ್ದಾರೆ. ಇಬ್ಬರು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ ಕಳ್ಳರು ಪತ್ತೆಯಾಗಿಲ್ಲ.
ಇದನ್ನೂ ಓದಿ – ಪೊದೆಯಲ್ಲಿ ಮೃತದೇಹ ಪತ್ತೆ ಕೇಸ್, ಮೃತನ ಅಣ್ಣ ಅರೆಸ್ಟ್, ಹತ್ಯೆಗೆ ಇತ್ತಂತೆ 2 ಕಾರಣ
ಮೇರಿ ಜೋಸ್ಫಿನ್ ಅವರು ಧರಿಸಿದ್ದ 30 ಗ್ರಾಂ ತೂಕದ ಎರಡು ಬಂಗಾರದ ಬಳೆಗಳು, 55 ಗ್ರಾಂ ತೂಕದ ಒಂದ ಎಳೆಯ ಚಿನ್ನದ ಸರ ಕಳ್ಳತನ ಮಾಡಲಾಗಿದೆ. ಇವುಗಳ ಮೌಲ್ಯ 3.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸರೆಂದು ನಂಬಿಸಿ, ನಕಲಿ ಐಡಿ ಕಾರ್ಡ್ ತೋರಿಸಿ ಮಹಿಳೆಯನ್ನು ವಂಚಿಸಿದವರ ವಿರುದ್ಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೆ ಮೊದಲಲ್ಲ ಇಂತಹ ಪ್ರಕರಣ
ತಾವು ಪೊಲೀಸರು (fake police) ಎಂದು ಜನರನ್ನು ನಂಬಿಸಿ ದರೋಡೆ, ಕಳ್ಳತನ ಮಾಡಿರುವ ಪ್ರಕರಣ ಇದೆ ಮೊದಲಲ್ಲ. ರಾಜ್ಯದ ವಿವಿಧೆಡೆ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಪೊಲೀಸ್ ಸಿಬ್ಬಂದಿ ನಡು ರಸ್ತೆಯಲ್ಲಿಯೇ ಜನರಿಂದ ಚಿನ್ನಾಭರಣ ತೆಗೆಸುವುದಿಲ್ಲ. ಯಾರೆಂದರೆ ಅವರು ತಮ್ಮನ್ನು ತಾವು ಪೊಲೀಸ್ ಇಲಾಖೆಗೆ ಸಂಬಂಧಿಸಿದವರು ಎಂದು ವಂಚಿಸಲು ಯತ್ನಿಸಿದರೆ ತಕ್ಷಣದ ಹತ್ತಿರದ ಠಾಣೆ ಅಥವಾ 121ಗೆ ಕರೆ ಮಾಡಿ ಪರಿಶೀಲಿಸಿಕೊಳ್ಳಬಹುದಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200