ಫೋನ್‌ ಪೇ ಮಾಡುವಾಗ ಶಿವಮೊಗ್ಗದ ಆಕೌಂಟೆಂಟ್‌ಗೆ ಕಾದಿತ್ತು ಶಾಕ್

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIMOGA NEWS, 8 OCTOBER 2024 : ವ್ಯಕ್ತಿಯೊಬ್ಬರ ಪ್ಯಾನ್‌ ನಂಬರ್‌ (Pan Number) ದುರ್ಬಳಕೆ ಮಾಡಿಕೊಂಡು, 7 ನಕಲಿ ಕಂಪನಿಗಳನ್ನು ಸ್ಥಾಪಿಸಿ, ಸರ್ಕಾರಕ್ಕೆ ಜಿ.ಎಸ್‌.ಟಿ ವಂಚಿಸಲಾಗಿದೆ. ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಿದ್ದ ಹಿನ್ನೆಲೆ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬ್ಯಾಂಕ್‌ಗೆ ಹೋದಾಗ ಕಾದಿತ್ತು ಶಾಕ್‌

ಶಿವಮೊಗ್ಗದ ಅಕೌಂಟೆಂಟ್‌ ಒಬ್ಬರು (ಹೆಸರು ಗೌಪ್ಯ) ಸ್ನೇಹಿತರೊಬ್ಬರಿಗೆ ಫೋನ್‌ ಪೇ ಮೂಲಕ ಹಣ ವರ್ಗಾವಣೆ ಮಾಡಲು ಯತ್ನಿಸಿದಾಗ ಬ್ಯಾಂಕ್‌ ಖಾತೆ ಫ್ರೀಜ್‌ ಆಗಿರುವ ವಿಚಾರ ಗೊತ್ತಾಗಿದೆ. ಕೂಡಲೆ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಮುಂಬೈನ ಕೇಂದ್ರಿಯ ಜಿ.ಎಸ್.ಟಿ ಕಚೇರಿ ನೊಟೀಸ್‌ ಮೇರೆಗೆ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಏಳು ನಕಲಿ ಕಂಪನಿ ಸ್ಥಾಪನೆ

ಈ ಕುರಿತು ಅಕೌಂಟೆಂಟ್‌ ಅವರು ಪರಿಶೀಲಿಸಿದಾಗ ಅವರ ಪ್ಯಾನ್‌ ಕಾರ್ಡ್‌ ನಂಬರ್‌ ದುರ್ಬಳಕೆ ಮಾಡಿಕೊಂಡು, ಏಳು ನಕಲಿ ಕಂಪನಿ ಸ್ಥಾಪಿಸಿರುವುದು ಗೊತ್ತಾಗಿದೆ. ಇವುಗಳ ಮೂಲಕ ಜಿ.ಎಸ್‌.ಟಿ ವಂಚನೆ ಮಾಡಿದ್ದ ಹಿನ್ನೆಲೆ ಬ್ಯಾಂಕ್‌ ಖಾತೆ ಫ್ರೀಜ್‌ ಮಾಡಲಾಗಿತ್ತು. ಆನ್‌ಲೈನ್‌ ಮೂಲಕ ತಮ್ಮ ಪ್ಯಾನ್‌ ಕಾರ್ಡ್‌ ಬಳಸಿ ಕಂಪನಿಗಳನ್ನು ರಿಜಿಸ್ಟರ್‌ ಮಾಡಿಕೊಂಡು, ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಿ ಅಕೌಂಟೆಂಟ್‌ ದೂರು ನೀಡಿದ್ದಾರೆ. ಶಿವಮೊಗ್ಗದ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಇದನ್ನೂ ಓದಿ » ಶಿವಮೊಗ್ಗ, ಶಿಕಾರಿಪುರ ಟೋಲ್‌, ಸಚಿವರನ್ನು ಭೇಟಿಯಾದ ನಿಯೋಗ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment