ಹರಿಗೆ ಬಳಿಕ ಅಪಘಾತ, ರಸ್ತೆ ದಾಟಲು ನಿಂತಿದ್ದ ವೃದ್ಧ ಸಾವು

ಶಿವಮೊಗ್ಗ: ನಗರದ ಹರಿಗೆಯ ಬಿ.ಹೆಚ್‌.ರಸ್ತೆಯಲ್ಲಿ ರಸ್ತೆ ದಾಟಲು (Pedestrian) ನಿಂತಿದ್ದ ವೃದ್ಧನಿಗೆ ಬೈಕ್ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರಿಗೆ ನಿವಾಸಿ ಜಯಣ್ಣ (62) ಮೃತರು. (ಈ ಸುದ್ದಿಯನ್ನು ಇನ್ನು 20 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಆಶಿಶ್ ಕೆ. ಶ್ಯಾಮ್ ಎಂಬುವವರು ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಕ್ ಸವಾರನ ವಿರುದ್ಧ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Police-Jeep-in-Shimoga-city