ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಶಿಕ್ಷಕರ ನೇಮಕಾತಿಗೆ ಅರ್ಜಿ

ಶಿವಮೊಗ್ಗ: ಶಾಲಾ ಶಿಕ್ಷಣ ಇಲಾಖೆಯು 2026–27ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ಖಾಲಿ ಇರುವ ಬಿಐಇಆರ್‌ಟಿ ವಿಶೇಷ ಶಿಕ್ಷಕರ (special educator) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನೇರ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪ್ರಾಥಮಿಕ ಹಂತದ 1ರಿಂದ 5ನೇ ತರಗತಿಯ ಹುದ್ದೆಗಳಿಗೆ ಆರ್‌ಸಿಐನಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಡಿ.ಇಡಿ (ವಿಶೇಷ ಶಿಕ್ಷಣ) ಅಥವಾ ಸಮಾನವಾದ ಡಿ.ಎಲ್‌.ಇಡಿ ಪದವಿ ಪಡೆದಿರಬೇಕು. ಸಿ.ಆರ್.ಆರ್ ಸಂಖ್ಯೆ ಹೊಂದಿರಬೇಕು. ಪ್ರೌಢಶಾಲಾ ಹಂತದ 6ರಿಂದ 12ನೇ ತರಗತಿ ಹುದ್ದೆಗಳಿಗೆ ಆರ್‌ಸಿಐನಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಇಡಿ (ವಿಶೇಷ ಶಿಕ್ಷಣ) ಪದವಿ ಹಾಗೂ ಸಿ.ಆರ್.ಆರ್ ಸಂಖ್ಯೆ ಹೊಂದಿರಬೇಕು.

DDPI-office-Shimoga.

ಆಸಕ್ತ ಅಭ್ಯರ್ಥಿಗಳು ನಗರದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 19 ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.