ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ

ಹೊಸನಗರ: ದೇವರ ಕಾರ್ಯದ ಸಂದರ್ಭ ಕಲಹವಾಗಿ ವ್ಯಕ್ತಿಯೊಬ್ಬನ (Person) ಹತ್ಯೆ ಮಾಡಲಾಗಿದೆ. ಹೊಸನಗರ ತಾಲೂಕು ನಿಟ್ಟೂರು ಕರ್ಕಮುಡಿಯಲ್ಲಿ ಭಾನುವಾರ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರಸ್ತೆ ಪಕ್ಕದ ತೋಟಕ್ಕೆ ಹಾರಿ ಉಲ್ಟಾ ಬಿದ್ದ ಆಟೋ, ಐವರಿಗೆ ಗಾಯ
ದೇವಿಚಂದ್ರ (52) ಮೃತ ವ್ಯಕ್ತಿ. ದೇವಿಚಂದ್ರನ ಪತ್ನಿಯ ಸಹೋದರ ಮತ್ತು ಪತ್ನಿಯ ಮೊದಲ ಪತಿಯ ಪುತ್ರ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಓಂಕಾರ್ ಮನೆ ಸಮೀಪ ನಾಗಚೌಡಿ ದೇವಸ್ಥಾನದಲ್ಲಿ ಪೂಜೆ ಕಾರ್ಯವಿತ್ತು. ದೇವಿಚಂದ್ರ ಕೂಡ ಅಲ್ಲಿಗೆ ಆಗಮಿಸಿದ್ದರು. ಈ ಸಂದರ್ಭ ಕೌಟುಂಬಿಕ ಕಲಹ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ದೇವಿಚಂದ್ರ ತಲೆಗೆ ಕಟ್ಟಿಗೆಯಿಂದ ಹೊಡೆತ ಬಿದಿದೆ. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.







