ಡ್ರಾ ಮಾಡಿಲ್ಲ, ಮೆಸೇಜು ಬಂದಿಲ್ಲ, ಅಕೌಂಟ್‌ನಲ್ಲಿದ್ದ 2.09 ಲಕ್ಷ ರೂ. ಮಂಗಮಾಯ, ಶಿವಮೊಗ್ಗದಲ್ಲಿ ದೂರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 9 MARCH 2021

ಬ್ಯಾಂಕ್‍ನಿಂದ ಯಾವುದೆ ಮೆಸೇಜ್ ಬರದೆ ವ್ಯಕ್ತಿಯೊಬ್ಬರ ಖಾತೆಯಿಂದ 2.09 ಲಕ್ಷ ರೂ. ಹಣ ಕಣ್ಮರೆಯಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯ್  ಕುಮಾರ್ ಸಿಂಗ್ ಅವರ ಖಾತೆಯಿಂದ ಹಣ ಮಾಯವಾಗಿದೆ. ಇವರು ತಮ್ಮ ತಾಯಿ ಜೊತೆಗೆ ಜಾಯಿಂಟ್ ಅಕೌಂಟ್ ಹೊಂದಿದ್ದಾರೆ. ಉತ್ತರ ಪ್ರದೇಶದ ಲಕ್ನೋನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಲ್ಲಿ ಖಾತೆ ಇದೆ.

ಇತ್ತೀಚೆಗೆ ಖಾತೆಯನ್ನು ಪರಿಶೀಲಿಸುತ್ತಿದ್ದಾಗ ಹಣ ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ. ಜನವರಿ 7 ರಿಂದ ಫೆಬ್ರವರಿ 20ರ ನಡುವೆ 2.09 ಲಕ್ಷ ರೂ. ಹಣ ಕಟ್ ಆಗಿದೆ. ಇದರ ಕುರಿತು ಯಾವುದೆ ಮೆಸೇಜು ಮೊಬೈಲ್‍ಗೆ ಬಂದಿಲ್ಲ. ಆದ್ದರಿಂದ ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳಬೇಕು ಎಂದು ಅಜಯ್ ಕುಮಾರ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment