ಶಿವಮೊಗ್ಗದಲ್ಲಿ ಬಸ್‌ ಹತ್ತುವಾಗ ಕೀ ಕೆಳಗೆ ಬಿತ್ತು, ಎತ್ತಿಕೊಂಡ ನಂತರ ಹಿರಿಯ ನಾಗರಿಕನಿಗೆ ಕಾದಿತ್ತು ಶಾಕ್

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 20 SEPTEMBER 2023

SHIMOGA : ಬಸ್‌ ಹತ್ತುವ ವೇಳೆ ಹಿರಿಯ ನಾಗರಿಕರೊಬ್ಬರ (Aged Person) ಬಳಿ ಇದ್ದ ನಗದು ಕಳ್ಳತನ ಮಾಡಲಾಗಿದೆ. ಮೊಮ್ಮಗನ ಶಾಲೆಯ ಫೀಸ್‌ ಕಟ್ಟಲು ತಂದಿದ್ದ ಹಣವನ್ನು ಕಳ್ಳತನ (PICK POCKET) ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕುಲಗಟ್ಟೆ ಗ್ರಾಮದ ಹನುಮಂತಪ್ಪ ಎಂಬುವವರು ಸೆ.16ರಂದು ಶಿವಮೊಗ್ಗಕ್ಕೆ ಆಗಮಿಸಿದ್ದರು. ಗೋಪಾಳದಲ್ಲಿರುವ ಖಾಸಗಿ ಶಾಲೆಯಲ್ಲಿ ಹನುಮಂತಪ್ಪ ಅವರ ಮೊಮ್ಮಗ ಓದುತ್ತಿದ್ದಾನೆ. ಆತನ ಶಾಲಾ ಶುಲ್ಕ ಪಾವತಿಸಲು 60 ಸಾವಿರ ರೂ. ಹಣ ತಂದಿದ್ದರು.

ಗಣೇಶ ಚತುರ್ಥಿ ಹಿನ್ನೆಲೆ ಶಾಲೆಗೆ ರಜೆ ಇರಲಿದೆ. ಮೊಮ್ಮಗನನ್ನು ಕರೆದೊಯ್ಯುವಂತೆ ಹನುಮಂತಪ್ಪ ಅವರಿಗೆ ತಿಳಿಸಿದ ಶಾಲೆಯ ಆಡಳಿತ ಮಂಡಳಿ, ಹಬ್ಬದ ನಂತರ ಶುಲ್ಕ ಪಾವತಿಸುವಂತೆ ತಿಳಿಸಿದರು. ಈ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಬಂದ ಹನುಮಂತಪ್ಪ, ತಮ್ಮೂರಿಗೆ ತೆರಳುವ ಬಸ್‌ ಹತ್ತಿದ್ದಾರೆ. ಈ ವೇಳೆ ಜೇಬಿನಿಂದ ಬೀಗ ಕಳೆಗೆ ಬಿದ್ದಿದೆ. ಅದನ್ನು ಎತ್ತಿಕೊಂಡು ಚೆಡ್ಡಿ ಜೇಬು ಪರಿಶೀಲಿಸಿದಾಗ 60 ಸಾವಿರ ರೂ. ಹಣ ಕಳ್ಳತನವಾಗಿರುವುದು (PICK POCKET) ಗೊತ್ತಾಗಿದೆ.

ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಸೈಲೆನ್ಸರ್‌ಗಳನ್ನು ಸಾಲಾಗಿರಿಸಿ ರೋಡ್‌ ರೋಲರ್‌ ಹತ್ತಿಸಿದ ಪೊಲೀಸರು

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment