SHIVAMOGGA LIVE NEWS | 19 SEPTEMBER 2023
SHIRALAKOPPA : ದೋಷಪೂರಿತ ಬೈಕ್ ಸೈಲೆನ್ಸರ್ಗಳನ್ನು (Silencer) ವಶಕ್ಕೆ ಪಡೆದ ಪೊಲೀಸರು ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರಲ್ಲೇ ನಾಶಪಡಿಸಿದರು.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪೊಲೀಸರು 20 ದೋಷಪೂರಿತ ಸೈಲೆನ್ಸರ್ಗಳನ್ನು (Silencer) ವಶಕ್ಕೆ ಪಡೆದಿದ್ದರು. ಟೌನ್ ಬಸ್ ನಿಲ್ದಾಣದ ಸಮೀಪ ಇವುಗಳನ್ನು ಸಾಲಾಗಿ ಇರಿಸಿ ನಾಶಪಡಿಸಲಾಗಿದೆ. ಇನ್ಮುಂದೆ ಇಂತಹ ದೋಷಪೂರಿತ ಸೈಲೆನ್ಸರ್ ಬಳಕೆ ಮಾಡಿದ ವಾಹನ ಮಾಲೀಕರು ಮತ್ತು ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ತುಂಗಾ ನದಿಯಲ್ಲಿ ಇಬ್ಬರು ಯುವಕರು ನೀರುಪಾಲು, ಒಬ್ಬನ ಮೃತದೇಹ ಪತ್ತೆ
ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಖಂಡಿ, ಶಿಕಾರಿಪುರ ಸರ್ಕಲ್ ಇನ್ಸ್ಪೆಕ್ಟರ್ ರುದ್ರೇಶ್, ಶಿರಾಳಕೊಪ್ಪ ಪಿಎಸ್ಐ ಮಂಜುನಾಥ್ ಸಿದ್ದಪ್ಪ ಕುರಿ ಮತ್ತು ಸಿಬ್ಬಂದಿ ಈ ವೇಳೆ ಹಾಜರಿದ್ದರು.