ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಸೆಪ್ಟಂಬರ್ 2020
ಪೊಲೀಸರ ಫೇಸ್‍ಬುಕ್ ಖಾತೆ ಮೇಲೆ ಖದೀಮರ ಕಣ್ಣು ಬಿದ್ದಿದೆ. ಕೆಲವರ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಿ, ಇನ್ನೂ ಕೆಲವರ ನಕಲಿ ಖಾತೆಗಳನ್ನು ಸೃಷ್ಟಿಸಿ, ಅವರ ಪರಿಚಿತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಖದೀಮರ ಹಾವಳಿಯಿಂದ ಪೊಲೀಸರು ಮುಜುಗರಕ್ಕೀಡಾಗಿದ್ದಾರೆ.
![]() |
ಯಾರೆಲ್ಲರ ಫೇಸ್‍ಬುಕ್ ಹ್ಯಾಕ್ ಆಗಿದೆ?
ಕೇಸ್ 1
ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಅಭಯ ಪ್ರಕಾಶ್ ಅವರ ಹೆಸರಿನಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಲಾಗಿದೆ. ಇದರ ಮೂಲಕ ಅವರ ಪರಿಚಿತರಿಗೆ ರಿಕ್ವಸ್ಟ್ ಕಳುಹಿಸಿ, ಫ್ರೆಂಡ್ ಮಾಡಿಕೊಂಡು, ಹಣ ಕೇಳಲಾಗಿದೆ. ತುರ್ತಾಗಿ ಹಣ ಬೇಕು ಎಂದು ಬೇಡಿಕೆ ಇಡಲಾಗಿದೆ. ಈಗಾಗಲೇ ಕೆಲವರು ಹಣ ನೀಡಿರುವ ಕುರಿತು ಮಾಹಿತಿ ಇದೆ.
ಕೇಸ್ 2
ಸಾಗರ ಗ್ರಾಮಾಂತರ ಠಾಣೆ ಇನ್ಸ್‍ಪೆಕ್ಟರ್ ಸುನಿಲ್ ಕುಮಾರ್ ಅವರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಅವರ ಸ್ನೇಹಿತರಿಂದ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ. ಆಗಸ್ಟ್ 27ರಂದು ಪ್ರಕರಣ ದಾಖಲಾಗಿತ್ತು.
ಕೇಸ್ 3
ಜಯನಗರ ಪೊಲೀಸ್ ಠಾಣೆಯ ನಿವೃತ್ತ ಸಬ್ ಇನ್ಸ್‍ಪೆಕ್ಟರ್ ಬಸವರಾಜು ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಫೇಸ್ ಬುಕ್ ಸ್ನೇಹಿತರಿಗೆ ಹತ್ತು ಸಾವಿರ ರೂ. ಕೊಡುವಂತೆ ಹ್ಯಾಕರ್‍ಗಳು ಕೇಳಿದ್ದಾರೆ. ಅವರ ಸ್ನೇಹಿತರು, ಸಂಬಂಧಿಗಳು ಕರೆ ಮಾಡಿ ವಿಚಾರಿಸಿದಾಗ ಹ್ಯಾಕ್ ಆಗಿರುವುದು ತಿಳಿದು ಬಂದಿದೆ. ಹಣ ನೀಡದಂತೆ ಬಸವರಾಜು ಅವರು ಮನವಿ ಮಾಡಿದ್ದಾರೆ.
ಸಂಜೆಯೊಳಗೆ ಹಣ ಕೊಡ್ತೀನಿ
ಪೊಲೀಸರ ನಕಲಿ ಖಾತೆಗಳಿಂದ ಅವರ ಪರಿಚಿತರಿಗೆ ಫೇಸ್‍ಬುಕ್ ಮೆಸೆಂಜರ್ ಮೂಲಕ ಮೆಸೇಜ್ ಕಳುಹಿಸಲಾಗುತ್ತದೆ. ಮೊದಲಿಗೆ ಉಭಯ ಕುಶಲೋಪರಿ ವಿಚಾರಿಸಿ, ನಂತರ ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ಹತ್ತು ಸಾವಿರವೋ, ಇಪ್ಪತ್ತು ಸಾವಿರವೋ ಹಣ ಕೇಳಲಾಗುತ್ತದೆ. ಸಂಜೆಯೊಳಗೆ ಅಥವಾ ಒಂದೆರಡು ದಿನದಲ್ಲಿ ಹಣ ಹಿಂತಿರುಗಿಸುವ ಭರವಸೆ ನೀಡಲಾಗುತ್ತದೆ. ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತದೆ.
ಪೊಲೀಸರ ಹೆಸರಿನಲ್ಲಿ ನಕಲಿ ಖಾತೆ, ಹಣಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಸೈಬರ್ ಕ್ರಮ್ ಠಾಣೆ ವತಿಯಿಂದ ಜಾಗೃತಿ ಸಂದೇಶ ಬಿಡುಗಡೆ ಮಾಡಲಾಗಿದೆ.
ಪೊಲೀಸರ ಹೆಸರಿನಲ್ಲಿ ನಕಲಿ ಖಾತೆ, ಪೊಲೀಸರ ಫೇಸ್‍ಬುಕ್ ಹ್ಯಾಕ್ ವಿಚಾರ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಹ್ಯಾಕರ್‍ಗಳ ಹೆಡೆಮುರಿ ಕಟ್ಟಲು ಬಲೆ ಬೀಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200