ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 31 AUGUST 2024 : ವಾಹನಗಳ ಇನ್ಷುರೆನ್ಸ್ (Insurance) ವಾಯಿದೆ ಮುಗಿದ್ದರೆ ತಕ್ಷಣ ರಿನಿವಲ್ ಮಾಡಿಸಿಕೊಳ್ಳಿ. ಸೆ.10ರ ನಂತರ ಇನ್ಷುರೆನ್ಸ್ ತಪಾಸಣೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಿಥುನ್ ಕುಮಾರ್, ಕಳೆದ ಎರಡ್ಮೂರು ವರ್ಷದಲ್ಲಿ ಅಪಘಾತದಲ್ಲಿ ಮೃತರಾದ ಹಲವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ. ವಾಹನಗಳ ಇನ್ಷುರೆನ್ಸ್ ರಿನಿವಲ್ ಮಾಡಿಸದೆ ಇರುವುದು ಇದಕ್ಕೆ ಕಾರಣ. ಆದ್ದರಿಂದ ವಾಹನ ಸವಾರರು ಇನ್ಷುರೆನ್ಸ್ ರಿನಿವಲ್ ಮಾಡಿಸಬೇಕು. ಇದಕ್ಕಾಗಿ ಸೆ.10ರವರೆಗೆ ಕಾಲವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೆ.10ರ ಬಳಿಕ ವಾಹನಗಳ ಇನ್ಷುರೆನ್ಸ್ ತಪಾಸಣೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ ಬಹುಭಾಗದಲ್ಲಿ ನಾಳೆ ಅರ್ಧ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ?