ಕೇರಳ ಲಾಟರಿಯಲ್ಲಿ ಬಹುಮಾನ ಗೆದ್ದ ಶಿಕ್ಷಕಿ, ಕೊನೆಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದೇಕೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಶಿವಮೊಗ್ಗ: ಕೇರಳ ಲಾಟರಿ ಬಂದಿರುವುದಾಗಿ ನಂಬಿಸಿ ಶಿಕ್ಷಕಿಯೊಬ್ಬರಿಂದ ಹಂತ ಹಂತವಾಗಿ ₹1,99,710 ಹಣ ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮೇ 22ರಂದು ಶಿಕ್ಷಕಿಯ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತಾನು ಕೇರಳ ಲಾಟರಿ ವಿಭಾಗದವನೆಂದು ಪರಿಚಯಿಸಿಕೊಂಡು ₹50 ಮೌಲ್ಯದ ಎರಡು ಲಾಟರಿ ಖರೀದಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಅನ್ನಪೂರ್ಣ ₹100 ವರ್ಗಾಯಿಸಿದ್ದರು. ಆ ಬಳಿಕ ವಾಟ್ಸಾಪ್‌ನಲ್ಲಿ ಲಾಟರಿ ಗೆದ್ದಿರುವ ಚಿತ್ರವನ್ನು ಕಳುಹಿಸಿದ ವಂಚಕರು, ಬಹುಮಾನದ ಹಣ ವಿತ್‌ಡ್ರಾ ಮಾಡಲು ಟಿಡಿಎಸ್, ಟ್ಯಾಕ್ಸ್ ಹಾಗೂ ಇತರೆ ಶುಲ್ಕ ಪಾವತಿಸಬೇಕು ಎಂದು ನಂಬಿಸಿದ್ದಾರೆ.

Shimogga-Cyber-Crime-CEN-Police-Station

ವಂಚಕನ ಮಾತು ನಂಬಿದ ಶಿಕ್ಷಕಿ ಮೇ 22ರಿಂದ ಜೂನ್ 4ರ ನಡುವೆ ಒಟ್ಟು ₹1,99,710 ಹಣವನ್ನು ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದರು. ಕೊನೆಗೆ ಬಹುಮಾನದ ಹಣ ನೀಡದೆ ಇದ್ದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!