ಶಿವಮೊಗ್ಗದ ವಿವಿಧೆಡೆ ಮನೆ, ಸಂಘಟನೆಯ ಕಚೇರಿ ಮೇಲೆ ಪೊಲೀಸರಿಂದ ದಿಢೀರ್ ದಾಳಿ

 SHIVAMOGGA LIVE NEWS 

ಶಿವಮೊಗ್ಗ | ಫ್ಲೆಕ್ಸ್ ವಿವಾದ (FLEX CONTROVERSY) ಸಂದರ್ಭದಲ್ಲಿ ಗಾಂಧಿಬಜಾರ್‌ನಲ್ಲಿ (GANDHI BAZAAR) ಯುವಕನಿಗೆ ಚಾಕು ಇರಿದ (ASSAULT) ಪ್ರಕರಣದ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ (POLICE RAID) ಮಾಡಿದ್ದರೆ. ಸಂಘಟನೆಯೊಂದರ ಲಿಂಕ್ ಸಾಧ್ಯತೆ ಹಿನ್ನೆಲೆ ನ್ಯೂ ಮಂಡಿಯಲ್ಲಿರುವ ಕಚೇರಿ ಮೇಲೆ ಮತ್ತು ಆರೋಪಿ ಜಬೀ ಸಹೋದರನ ಮನೆ ಮೇಲೂ ದಾಳಿ ನಡೆಸಿದರು.

Shimoga Nanjappa Hospital

ಚಾಕು ಇರಿತ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ನ್ಯಾಯಾಲಯದಿಂದ ವಾರಂಟ್ ಆದೇಶ ಪಡೆದು ದಾಳಿ (POLICE RAID) ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದರು.

ಅ.15ರಂದು ಪ್ರೇಮ್‌ ಸಿಂಗ್‌ಗೆ ಚಾಕು ಇರಿಯಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಪ್ರಮುಖ ಆರೋಪಿ ಮೊಹಮ್ಮದ್ ಜಬೀ ಮನೆ, ಎಸ್‌ಡಿಪಿಐ ಕಚೇರಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ.

Kalleshwara-Enterprises.webp

ಇದನ್ನೂ ಓದಿ – ಗೋಪಿ ಸರ್ಕಲ್’ನಲ್ಲಿ ಪಾಲಿಕೆ ಹೆಸರಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಪಾಲಿಕೆಗೇ ಗೊತ್ತಿಲ್ಲ, ತನಿಖೆ ಶುರು

ದೊಡ್ಡಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಅಂಜನ್ ಕುಮಾರ್, ಕುಂಸಿ ಠಾಣೆ ಇನ್‌ಸ್ಪೆಕ್ಟರ್‌ ಹರೀಶ್‌ ಪಟೇಲ್‌, ವಿನೋಬನಗರ ಠಾಣೆ ಇನ್‌ಸ್ಪೆಕ್ಟರ್‌ ರವಿಕುಮಾರ್, ಪಶ್ಚಿಮ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ್ ಮತ್ತು ತುಂಗಾನಗರ ಠಾಣಿಯ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಅಶಾಂತಿ ಬೆನ್ನಿಗೆ ನೀತಿ ರೂಪಿಸಲು ಪ್ಲಾನ್

ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು ತನ್ವಿರ್‌, ನದೀಮ್ ಮತ್ತು ಅಬ್ದುಲ್’ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಮೊಹಮ್ಮದ್ ಜಬೀ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Shimoga Nanjappa Hospital

ಇದನ್ನೂ ಓದಿ – ಶಿವಮೊಗ್ಗದಿಂದ ಇಬ್ಬರು ರೌಡಿ ಶೀಟರ್‌ಗಳ ಗಡಿಪಾರು, ಕಾರಣವೇನು?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment