ಶಿವಮೊಗ್ಗ ಪೊಲೀಸರ ದಿಢೀರ್‌ ಕಾರ್ಯಾಚರಣೆ, ರೌಡಿಗಳ ಮನೆಗಳ ಮೇಲೆ ದಾಳಿ

ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವ ಪೊಲೀಸರು ರೌಡಿಗಳ ಮನೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್‌ ಕಾರ್ಯಾಚರಣೆ (raid) ನಡೆಸಿದ ಪೊಲೀಸರು, ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

JNNCE-ADMISSION-2025-26

ರೌಡಿಗಳ ಮನೆಗಳಲ್ಲಿ ಮಾದಕ ವಸ್ತುಗಳು, ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ಅಲ್ಲದೆ ರೌಡಿಗಳು ಮಾಡುತ್ತಿರುವ ಕೆಲಸ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹಿಸಲಾಯಿತು. ಕಾನೂನು ಬಾಹಿರ ಚುಟವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌, ಎಎಸ್‌ಪಿಗಳಾದ ಅನಿಲ್‌ ಕುಮಾರ್‌ ಭೂಮರೆಡ್ಡಿ, ಶಿವಮೊಗ್ಗದ ಡಿವೈಎಸ್‌ಪಿಗಳಾದ ಬಾಬು ಅಂಜನಪ್ಪ, ಸಂಜೀವ್‌ ಕುಮಾರ್‌, ಭದ್ರಾವತಿ ಡಿವೈಎಸ್‌ಪಿ ನಾಗರಾಜ್‌, ಸಾಗರ ಡಿವೈಎಸ್‌ಪಿ ಗೋಪಲಾಕೃಷ್ಣ ತಿಮ್ಮಣ್ಣನಾಯ್ಕ್‌, ಶಿಕಾರಿಪುರ ಡಿವೈಎಸ್‌ಪಿ ಕೇಶವ, ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ » ಪಾಕ್‌ ಮೇಲೆ ದಾಳಿ, ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮೊದಲ ರಿಯಾಕ್ಷನ್‌, ಏನೆಲ್ಲ ಹೇಳಿದರು?

Police-raid-on-rowdy-houses-in-Shimoga-district

Police-raid-on-rowdy-houses-in-Shimoga-district

Police-raid-on-rowdy-houses-in-Shimoga-district

Police-raid-on-rowdy-houses-in-Shimoga-district

The-Team-PU-College-scaled

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
Police-raid-on-rowdy-houses-in-Shimoga-district

Leave a Comment