BREAKING NEWS | ವೇಶ್ಯಾವಾಟಿಕೆ ಆರೋಪ, ಶಿವಮೊಗ್ಗದ ಸ್ಪಾ ಮೇಲೆ ಪೊಲೀಸ್‌ ದಾಳಿ, ದಂಪತಿ ಅರೆಸ್ಟ್‌

SHIVAMOGGA LIVE NEWS | 25 MAY 2023

ಸುದ್ದಿಯ ಮುಂದಿನ ಭಾಗ ಕೆಳಗಿದೆ

SHIMOGA : ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ (Spa) ಮೇಲೆ ಪೊಲೀಸರು ದಾಳಿ ನಡೆಸಿ ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Police-Jeep-With-Light-New.

Nanjappa Hospital Advertisement

ಎಲ್ಲಿ ದಾಳಿಯಾಗಿದ್ದು?

ಶಿವಮೊಗ್ಗದ ಕುವೆಂಪು ರಸ್ತೆಯ ಸಾಯಿ ಆರ್ಕೆಡ್‌ನಲ್ಲಿರುವ ರಾಯಲ್‌ ಆರ್ಚ್‌ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ (Spa) ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೇರೆ ಕಡೆಯಿಂದ ಯುವತಿಯರನ್ನು ಕರೆಯಿಸಿ ಅವರಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಪೊಲೀಸರು ದಾಳಿ ಮಾಡಿದ್ದರು.

ಇದನ್ನೂ ಓದಿ – ವಾಟ್ಸಪ್‌ನಲ್ಲಿ ಶಿವಮೊಗ್ಗದ ಮಹಿಳೆಯ ಅಶ್ಲೀಲ ಚಿತ್ರ ಹಾಕಿದ ವ್ಯಕ್ತಿ, ಆರೋಪ ಸಾಬೀತಾದರೆ ವರ್ಷಗಟ್ಟಲೆ ಜೈಲು, ಲಕ್ಷಗಟ್ಟಲೆ ಫೈನ್‌

ಇಬ್ಬರು ಮಾಲೀಕರು ಅರೆಸ್ಟ್‌

ರಾಯಲ್‌ ಆರ್ಚ್‌ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ಮಾಡಿ ಆರು ಯುವತಿಯರನ್ನು ರಕ್ಷಿಸಲಾಗಿದೆ. ಸ್ಪಾದ ಮಾಲೀಕರಾದ ಗೋಪಾಲ ಮತ್ತು ವಿದ್ಯಾಶ್ರೀಯನ್ನು ಬಂಧಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಂ.ಸುರೇಶ್‌, ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ ಕುಮಾರ್‌ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment