ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಮಂಗಳೂರು ವಿಮಾನ ನಿಲ್ದಾಣದಲ್ಲಿ ಜೀವಂತ ಬಾಂಬ್ ಇರಿಸಿದ್ದ ಆದಿತ್ಯರಾವ್ಗಾಗಿ ಶಿವಮೊಗ್ಗ ಪೊಲೀಸರು ಮಂಗಳವಾರ ರಾತ್ರಿಯಿಡಿ ಶೋಧಕಾರ್ಯ ನಡೆಸಿದ್ದಾರೆ.
ಲಭ್ಯ ಮಾಹಿತಿ ಮೇರೆಗೆ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದು, ಅಷ್ಟರಲ್ಲಾಗಲೇ ಆತ ಸಾಗರದಿಂದ ಬೆಂಗಳೂರಿಗೆ ಹೋಗಿದ್ದಾನೆಂಬ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಮಂಗಳೂರಿನಿಂದ ಆತ ಉಡುಪಿ ಮಾರ್ಗವಾಗಿ ಜಿಲ್ಲೆಯ ಹೊಸನಗರ, ಸಾಗರ ತಲುಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆ ಆಧಾರದ ಮೇಲೆ ಹೊಸನಗರದಲ್ಲಿ ತಪಾಸಣೆ ನಡೆಸಲಾಗಿದೆ. ಆದರೆ, ಅಲ್ಲಿ ಯಾವುದೇ ಮಾಹಿತಿ ಸಿಗದ ಕಾರಣ ಸಾಗರ ತಾಲೂಕಿನ ನಗರ, ಗ್ರಾಮಗಳಲ್ಲಿಯೂ ಹುಡುಕಾಟ ಮಾಡಲಾಗಿದೆ. ಆದಿತ್ಯರಾವ್ ಕುರಿತು ಮಾಹಿತಿ ಸಿಕ್ಕಿಲ್ಲ.
ರೈಲು ಇಲ್ಲವೇ ಬಸ್ನಿಂದ ಬೆಂಗಳೂರಿಗೆ ಹೋಗಿರಬಹುದೆಂದು ಪೊಲೀಸ್ ಮೂಲಗಳು ಶಂಕಿಸಿವೆ. ಬುಧವಾರ ಬೆಳಗ್ಗೆ ಆತ ಬೆಂಗಳೂರು ತಲುಪಿದ ಮಾಹಿತಿ ಹಿನ್ನೆಲೆ ಶಿವಮೊಗ್ಗದಲ್ಲಿ ನಡೆಸಲಾಗುತ್ತಿದ್ದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Shimoga Police held a search operation in various parts of Sagara and Hosanagara taluk for Mangalore Airport Bomb Plotter Aditya Rao. Later the search operation came to a halt.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422