ಶಿವಮೊಗ್ಗ: ವಿನೋಬನಗರದ ತರಕಾರಿ ಮಂಡಿ ಬಳಿ ಕಳೆದ ರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ಮೂರು ತಂಡ (police teams) ರಚಿಸಲಾಗಿದೆ. ಶೀಘ್ರ ಮೂವರು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ, ಘಟನೆ ಕುರಿತು ವಿವರಣೆ ನೀಡಿದ್ದಾರೆ.
ಎಸ್.ಪಿ ಏನೆಲ್ಲ ಹೇಳಿದರು?
ಅರುಣ್ (26) ಎಂಬಾತನ ಹತ್ಯೆಯಾಗಿದೆ. ಆತನ ಹೆಂಡತಿಯ ಸೋದರ ಮಾವ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ. ಅರುಣ್ ತನ್ನ ಬೈಕಿನಲ್ಲಿ ಬಂದು ಅಂಗಡಿಯೊಂದರ ಮುಂದೆ ನಿಂತಿದ್ದ. ಆಗ ಈ ಮೂವರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಅರುಣ್‌ನನ್ನು ಆಸ್ಪತ್ರೆ ಕರೆದೊಯ್ದಾಗ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹೇಳಿದರು.

ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು
ವೈಯಕ್ತಿಕ ಸಮಸ್ಯೆಯೇ ಕಾರಣ
ಐದಾರು ವರ್ಷದ ಹಿಂದೆ ಅರುಣ್ ಮದುವೆಯಾಗಿದ್ದ. ದಂಪತಿಗೆ ಮಗು ಕೂಡ ಇದೆ. ಅರುಣ್ ಮತ್ತು ಆತನ ಪತ್ನಿ ಮಧ್ಯೆ ಬಹು ಸಮಯದಿಂದ ಭಿನ್ನಾಭಿಪ್ರಾಯ ಇತ್ತು. ಈತ ಮದ್ಯ ಸೇವಿಸಿ ಗಲಾಟೆ ಮಾಡುತ್ತಾನೆ ಎಂದು ಆತನ ವಿರುದ್ಧ ಗಲಾಟೆ ಆಗಿತ್ತು. ಕುಟುಂಬದವರೆಲ್ಲ ಸೇರಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಈ ಕೊಲೆಯಾಗಿದೆ ಎಂದು ತಿಳಿಸಿದರು.
LATEST NEWS
- ಶಿವಮೊಗ್ಗಕ್ಕೆ ಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಕಾರಾಗೃಹಕ್ಕೆ ಭೇಟಿ

- ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿದ ವ್ಯಕ್ತಿ ಸಾವು, ಎರಡು ಭಾಗವಾದ ದೇಹ

- ಒಂದು ಮೆಸೇಜ್, ಶಿವಮೊಗ್ಗದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ₹6.50 ಲಕ್ಷ ಮಾಯ, ಏನಿತ್ತು ಮೆಸೇಜ್ನಲ್ಲಿ?

- ಸಂಸದ ರಾಘವೇಂದ್ರ ಕಾರಿಗೆ ಮತ್ತೊಂದು ಕಾರು ಡಿಕ್ಕಿ, ಆಗಿದ್ದೇನು?

- ಅರಬಿಳಚಿ ದುರಂತ, ಭದ್ರಾ ನಾಲೆಯಲ್ಲಿ ಎರಡನೇ ಮೃತದೇಹ ಪತ್ತೆ

About The Editor
ನಿತಿನ್ ಆರ್.ಕೈದೊಟ್ಲು





