ಶಿವಮೊಗ್ಗ : ಮಹಿಳೆಯೊಬ್ಬರು ಫೇಸ್ಬುಕ್ನಲ್ಲಿ ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (Priest) ಸಂಕಷ್ಟ ತಂದೊಡ್ಡಿದೆ. ಲಕ್ಷ ಲಕ್ಷ ರೂ. ಹಣ ಕಳೆದುಕೊಂಡಿರುವ ಅರ್ಚಕ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಮತಾ ಕಳಹಿಸಿದ ರಿಕ್ವೆಸ್ಟ್
ಮಮತಾ ಜಾಯ್ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (ಹೆಸರು, ಊರು ಗೌಪ್ಯ) ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಬಂದಿತ್ತು. ಕೆಲ ಸಮಯದ ನಂತರ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಿಪ್ಲೆ ಮಾಡಿದ ಮಮತಾ ಜಾಯ್, ತನ್ನ ವಾಟ್ಸಪ್ ನಂಬರ್ ಹಂಚಿಕೊಂಡು ಚಾಟಿಂಗ್ ಮಾಡಿದ್ದಳು.
ಲಂಡನ್ ಗಿಫ್ಟ್ ಕತೆ ಹೆಣೆದ ಮಮತಾ
ಬಳಿಕ ಲಂಡನ್ನಲ್ಲಿ ಲ್ಯಾಪ್ಟಾಪ್, ಐ – ಫೋನ್, ಶೂ, ಬಟ್ಟೆ, ಬಂಗಾರದ ಸರ ಸೇರಿದಂತೆ ಬೆಲೆ ಬಾಳುವ ಗಿಫ್ಟ್ಗಳನ್ನು ಖರೀದಿಸಿ ಕಳುಹಿಸುತ್ತಿರುವುದಾಗಿ ಮಮತಾ ಜಾಯ್ ತಿಳಿಸಿದ್ದಳು. ಅವುಗಳ ಫೋಟೊ ಸಹಿತ ಮೆಸೇಜ್ ಕಳುಹಿಸಿದ್ದಳು.
ಇದನ್ನೂ ಓದಿ » ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್, ಮೊಬೈಲ್ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?
ಕೊರಿಯರ್ ಸೀಸ್ ಆಗಿದೆ..!
ಫೆ.24ರಂದು ದೆಹಲಿಯ ಕೊರಿಯರ್ ಕಚೇರಿಯಿಂದ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಲಕ್ಷಾಂತರ ಮೌಲ್ಯದ ಗಿಫ್ ಸೀಸ್ ಆಗಿದೆ. ಇದಕ್ಕೆ ಕೊರಿಯರ್ ಚಾರ್ಜ್, ಕಸ್ಟಮ್ಸ್ ಚಾರ್ಜ್, ಇನ್ಕಮ್ ಟ್ಯಾಕ್ಸ್ ಸೇರಿದಂತೆ ನಾನಾ ಚಾರ್ಜ್ ಕಟ್ಟಬೇಕು ಎಂದು ನಂಬಿಸಿ ವಿವಿಧ ಹಂತದಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 6.43 ಲಕ್ಷ ರೂ. ಹಣ ಕಳೆದುಕೊಂಡಿರುವುದಾಗಿ ಅರ್ಚಕ (Priest) ದೂರಿನಲ್ಲಿ ಆರೋಪಿಸಿದ್ದಾರೆ. ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಿಫ್ಟ್ ಹೆಸರಲ್ಲಿ ವಂಚಿಸ್ತಾರೆ
ಸೈಬರ್ ಖದೀಮರು ದಿನಕ್ಕೊಂದು ವರಸೆ ಬದಲಿಸುತ್ತಾರೆ. ವಿದೇಶದಿಂದ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಬಳಿಕ ನಾನಾ ವರಸೆ ತೆಗೆದು ಹಣ ಪಡೆಯುತ್ತಾರೆ. ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರಿಗೆ ಹಣ ವರ್ಗಾಯಿಸುವಾಗ ಎಚ್ಚರವಿರಲಿ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200