ಅರ್ಚಕರಿಗೆ ಲಂಡನ್‌ ಮಮತಾಳಿಂದ ಬಂತು ಫ್ರೆಂಡ್‌ ರಿಕ್ವೆಸ್ಟ್‌, ಅಕ್ಸೆಪ್ಟ್‌ ಮಾಡಿದ್ಮೇಲೆ ಕಾದಿತ್ತು ಬಿಗ್‌ ಶಾಕ್‌

ಶಿವಮೊಗ್ಗ : ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಕಳುಹಿಸಿದ್ದ ಫ್ರೆಂಡ್‌ ರಿಕ್ವೆಸ್ಟ್‌ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (Priest) ಸಂಕಷ್ಟ ತಂದೊಡ್ಡಿದೆ. ಲಕ್ಷ‌ ಲಕ್ಷ ರೂ. ಹಣ ಕಳೆದುಕೊಂಡಿರುವ ಅರ್ಚಕ, ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮಮತಾ ಕಳಹಿಸಿದ ರಿಕ್ವೆಸ್ಟ್‌

ಮಮತಾ ಜಾಯ್‌ ಎಂಬ ಹೆಸರಿನಲ್ಲಿ ಶಿವಮೊಗ್ಗ ಜಿಲ್ಲೆಯ ಅರ್ಚಕರೊಬ್ಬರಿಗೆ (ಹೆಸರು, ಊರು ಗೌಪ್ಯ) ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್‌ ಬಂದಿತ್ತು. ಕೆಲ ಸಮಯದ ನಂತರ ಆಕೆಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ರಿಪ್ಲೆ ಮಾಡಿದ ಮಮತಾ ಜಾಯ್‌, ತನ್ನ ವಾಟ್ಸಪ್‌ ನಂಬರ್‌ ಹಂಚಿಕೊಂಡು ಚಾಟಿಂಗ್‌ ಮಾಡಿದ್ದಳು.

SMS-Fraud-Shimoga-CEN-Police-Station.

ಲಂಡನ್‌ ಗಿಫ್ಟ್‌ ಕತೆ ಹೆಣೆದ ಮಮತಾ

ಬಳಿಕ ಲಂಡನ್‌ನಲ್ಲಿ ಲ್ಯಾಪ್‌ಟಾಪ್‌, ಐ – ಫೋನ್‌, ಶೂ, ಬಟ್ಟೆ, ಬಂಗಾರದ ಸರ ಸೇರಿದಂತೆ ಬೆಲೆ ಬಾಳುವ ಗಿಫ್ಟ್‌ಗಳನ್ನು ಖರೀದಿಸಿ ಕಳುಹಿಸುತ್ತಿರುವುದಾಗಿ ಮಮತಾ ಜಾಯ್‌ ತಿಳಿಸಿದ್ದಳು. ಅವುಗಳ ಫೋಟೊ ಸಹಿತ ಮೆಸೇಜ್‌ ಕಳುಹಿಸಿದ್ದಳು.

Web-Design

ಇದನ್ನೂ ಓದಿ » ಗಾಜನೂರಿನಲ್ಲಿ ನಡುರಾತ್ರಿ ಕೇಳಿತು ಶಬ್ದ, ಹೊರಗೆ ಕಾಣಿಸ್ತು ಸ್ಯಾಂಟ್ರೋ ಕಾರ್‌, ಮೊಬೈಲ್‌ನಲ್ಲಿ ದೃಶ್ಯ ಸೆರೆ, ಏನಿದು ಕೇಸ್?

ಕೊರಿಯರ್‌ ಸೀಸ್‌ ಆಗಿದೆ..!

ಫೆ.24ರಂದು ದೆಹಲಿಯ ಕೊರಿಯರ್‌ ಕಚೇರಿಯಿಂದ ಎಂದು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಲಕ್ಷಾಂತರ ಮೌಲ್ಯದ ಗಿಫ್‌ ಸೀಸ್‌ ಆಗಿದೆ. ಇದಕ್ಕೆ ಕೊರಿಯರ್‌ ಚಾರ್ಜ್‌, ಕಸ್ಟಮ್ಸ್‌ ಚಾರ್ಜ್‌, ಇನ್‌ಕಮ್‌ ಟ್ಯಾಕ್ಸ್‌ ಸೇರಿದಂತೆ ನಾನಾ ಚಾರ್ಜ್‌ ಕಟ್ಟಬೇಕು ಎಂದು ನಂಬಿಸಿ ವಿವಿಧ ಹಂತದಲ್ಲಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟು 6.43 ಲಕ್ಷ ರೂ. ಹಣ ಕಳೆದುಕೊಂಡಿರುವುದಾಗಿ ಅರ್ಚಕ (Priest) ದೂರಿನಲ್ಲಿ ಆರೋಪಿಸಿದ್ದಾರೆ. ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಿಫ್ಟ್‌ ಹೆಸರಲ್ಲಿ ವಂಚಿಸ್ತಾರೆ

ಸೈಬರ್‌ ಖದೀಮರು ದಿನಕ್ಕೊಂದು ವರಸೆ ಬದಲಿಸುತ್ತಾರೆ. ವಿದೇಶದಿಂದ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಬಳಿಕ ನಾನಾ ವರಸೆ ತೆಗೆದು ಹಣ ಪಡೆಯುತ್ತಾರೆ. ಲಕ್ಷಾಂತರ ರೂ. ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದವರಿಗೆ ಹಣ ವರ್ಗಾಯಿಸುವಾಗ ಎಚ್ಚರವಿರಲಿ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment