ಶಿವಮೊಗ್ಗ: ಬಿ.ಹೆಚ್.ರಸ್ತೆಯ ಪಾರ್ಕಿಂಗ್ (Parking) ಸ್ಥಳದಲ್ಲಿ ನಿಲ್ಲಿಸಿದ್ದ ಪಲ್ಸರ್ ಬೈಕ್ ಕಳ್ಳತನವಾಗಿದೆ ಎಂದು ಆರೋಪಿಸಿ ಮಾಲೀಕ ದೂರು ನೀಡಿದ್ದಾರೆ.
ಕೆಎಸ್‌ಆರ್‌ಟಿಸಿಯ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆಲ್ಬರ್ಟ್ ಮನೋಹರ್ ಎಂಬುವವರು ತಮ್ಮ ಪಲ್ಸರ್ ಬೈಕ್ ಅನ್ನು ಬಿ.ಹೆಚ್.ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದರು. ಸ್ವಲ್ಪ ಸಮಯದ ಬಳಿಕ ಪಾರ್ಕಿಂಗ್ ಜಾಗಕ್ಕೆ ಬಂದಾಗ ಬೈಕ್ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ » ಮೈಸೂರು – ಶಿವಮೊಗ್ಗ, ತಾಳಗುಪ್ಪ ರೈಲುಗಳು ಮಾರ್ಗ ಮಧ್ಯೆ ನಿಯಂತ್ರಣ, ಯಾವ್ಯಾವ ದಿನ? ಎಷ್ಟು ನಿಮಿಷ ನಿಯಂತ್ರಣ?

