SHIVAMOGGA LIVE | 7 JUNE 2023
SHIMOGA : ಹೊನ್ನಾಳಿ ರಸ್ತೆಯಲ್ಲಿ (Road) ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತಕ್ಕೆ ಕಾರಣ ಬಯಲಾಗಿದೆ. ರಸ್ತೆಯಲ್ಲಿ ದನ ಅಡ್ಡ ಬಂದಿದ್ದರಿಂದ ಘಟನೆ ಸಂಭವಿಸಿದೆ ಎಂದು ಎಫ್ಐಅರ್ನಲ್ಲಿ ತಿಳಿಸಲಾಗಿದೆ.
ಜೂ.5ರಂದು ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ (Road) ಕಾರು ಮರಕ್ಕೆ ಡಿಕ್ಕಿಯಾಗಿ ಚಾಲಕ ಶರತ್ ಕುಮಾರ್ (34) ಮೃತಪಟ್ಟಿದ್ದರು. ಕಾರಿನಲ್ಲಿದ್ದ ಅವರ ಪತ್ನಿ ಪ್ರೀತಿ ಮತ್ತು ನಾಲ್ಕು ವರ್ಷ ಮಗ ಕುಶಾಲ್ಗೆ ಸಣ್ಣಪುಟ್ಟ ಗಾಯವಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಇನ್ನೋವಾ, ಬೈಕ್ ಮುಖಾಮುಖಿ ಡಿಕ್ಕಿ, ಸಿಸಿಟಿವಿ ದೃಶ್ಯ ಹೇಳಿತು ಸಾಕ್ಷಿ
ಶರತ್ ಕುಮಾರ್ ಕುಟುಂಬ ಸಹಿತ ಶಿವಮೊಗ್ಗದ ಆಸ್ಪತ್ರೆಗೆ ಬಂದಿದ್ದರು. ಮಧ್ಯಾಹ್ನ ಶಿವಮೊಗ್ಗದಿಂದ ಹೊನ್ನಾಳಿ ತಾಲೂಕು ಸುಂಕದಕಟ್ಟೆ ಗ್ರಾಮದಲ್ಲಿರುವ ಮನೆಗೆ ಮರಳುತ್ತಿದ್ದರು. ಶಿವಮೊಗ್ಗ ತಾಲೂಕು ಸೂಗೂರು ಗ್ರಾಮದಿಂದ ಸುಮಾರು ಒಂದೂವರೆ ಕಿ.ಮೀ ಮುಂದೆ ರಸ್ತೆಯಲ್ಲಿ ದನ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ದನಕ್ಕೆ ಕಾರು ಡಿಕ್ಕಿ ಆಗುವುದನ್ನು ತಲ್ಪಿಸಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ