ಶಿವಮೊಗ್ಗ : ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕಿಯೊಬ್ಬರಿಗೆ (ಹೆಸರು ಗೌಪ್ಯ) ಆಯುರ್ವೇದ ಔಷಧ ಕೊಡುವುದಾಗಿ ನಂಬಿಸಿ 1.75 ಲಕ್ಷ ರೂ. ಪಡೆದು ವಂಚಿಸಲಾಗಿದೆ. ಈಗ ಹಣವನ್ನು ಹಿಂತಿರುಗಿಸಿಲ್ಲ. ಔಷಧವನ್ನು ಕೊಟ್ಟಿಲ್ಲ ಎಂದು ಆರೋಪಿಸಿ ನಿವೃತ್ತ ಶಿಕ್ಷಕಿ (Teacher) ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಸ್ಪತ್ರೆ ಮುಂದೆಯೇ ಸಿಕ್ಕ ವಂಚಕ
ನಿಯಮಿತ ಆರೋಗ್ಯ ತಪಾಸಣೆ ಮುಗಿಸಿ ನಿವೃತ್ತ ಶಿಕ್ಷಕಿ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದ. ಆಯುರ್ವೇದ ಔಷಧಿಯಿಂದ ಆರೋಗ್ಯ ಸುಧಾರಿಸಲಿದೆ ಎಂದು ನಂಬಿಸಿದ್ದ. ಅಲ್ಲದೆ ನಿವೃತ್ತ ಶಿಕ್ಷಕಿಯಿಂದ 25 ಸಾವಿರ ರೂ. ಮುಂಗಡ ಹಣ ಪಡೆದು ಆಯುರ್ವೇದ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದ.
ಲಕ್ಷ ಲಕ್ಷ ಹಣಕ್ಕೆ ಡಿಮಾಂಡ್
ನಿವೃತ್ತ ಶಿಕ್ಷಕಿಯ ಮನೆಗೆ ಬಂದಿದ್ದ ವಂಚಕ ಆಕೆಯನ್ನು ಆಯುರ್ವೇದ ಔಷಧ ಕೇಂದ್ರಕ್ಕೆ ಕರೆದೊಯ್ದಿದ್ದ. ಅಲ್ಲಿ ನಿವೃತ್ತ ಶಿಕ್ಷಕಿಯ ಮೂಗಿಗೆ ಏನೋ ಸವಿರದಂತೆ ಮಾಡಿ, ಅರೆಪ್ರಜ್ಞಳಾಗುವಂತೆ ಮಾಡಿ ಆರೋಗ್ಯ ಸಮಸ್ಯೆ ಸಂಪೂರ್ಣ ಪರಿಹಾರವಾಗಬೇಕಿದ್ದರೆ 5.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಕೊನೆಗೆ ತಮ್ಮ ಬ್ಯಾಂಕ್ ಖಾತೆಯಿಂದ 1.50 ಲಕ್ಷ ರೂ. ಹಣ ಬಿಡಿಸಿ ಕೊಟ್ಟದ್ದರು ಎಂದು ಆರೋಪಿಸಲಾಗಿದೆ.

ಹಣವೂ ಇಲ್ಲ, ಔಷಧವು ಇಲ್ಲ
ಹಣ ಪಡೆದ ವಂಚಕರು ಇನ್ಮುಂದೆ ಆಯುರ್ವೇದ ಕಚೇರಿಗೆ ಬರುವುದು ಬೇಡ. ಮನೆಗೆ ಔಷಧ ತಲುಪಿಸುವುದಾಗಿ ನಂಬಿಸಿದ್ದರು. ಔಷಧ ಬಾರದಿದ್ದರಿಂದ ನಿವೃತ್ತ ಶಿಕ್ಷಕಿ ಕರೆ ಮಾಡಿದಾಗ ಹೆಚ್ಚುವರಿ ಹಣ ಕೊಡಬೇಕು ಎಂದು ವಂಚಕರು ಸೂಚಿಸಿದ್ದಾರೆ. ಈ ಕುರಿತು ಪರಿಚಿತರ ಬಳಿ ತಿಳಿಸಿದಾಗ ಮತ್ತೆ ಹಣ ನೀಡದಂತೆ ಎಚ್ಚರಿಸಿದ್ದರು. ಹಾಗಾಗಿ ನಿವೃತ್ತ ಶಿಕ್ಷಕಿಯು ಹಣ ಕೊಡುವಂತೆ ಕರೆ ಮಾಡಿದಾಗಲು ಉಳಿದ ಹಣ ಕೊಡುವಂತೆ ಸೂಚಿಸಿದ್ದರು. ಇದರಿಂದ ನೊಂದ ಶಿಕ್ಷಕಿ ತುಂಗಾ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದನ್ನು ಓದಿ » ಸಿಗಂದೂರು ಲಾಂಚ್, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200