SHIVAMOGGA LIVE NEWS | 20 DECEMBER 2024
ಶಿವಮೊಗ್ಗ : ಬಂಗಾರದ ಅಂಗಡಿಯೊಂದರಿಂದ ಮಹಿಳೆಯೊಬ್ಬರು ಉಂಗುರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಮಾಲೀಕರು ಸ್ಟಾಕ್ ಚೆಕ್ ಮಾಡುವಾಗ ವ್ಯತ್ಯಾಸ ಕಂಡುಬಂದಿದ್ದರಿಂದ ಸಿಸಿಟಿವಿ ಪರಿಶೀಲಿಸಿದ್ದರು. ಆಗ ಮಹಿಳೆ ಉಂಗುರ (Ring) ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದುರ್ಗಿಗುಡಿ ಮುಖ್ಯರಸ್ತೆಯ ವಿ.ವಿ.ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಮಾಲೀಕ ವಿನೋದ್ ಪಾಟೀಲ್ ಅವರು ದೂರು ನೀಡಿದ್ದಾರೆ.
ಬದಲಿ ಉಂಗುರ ಇಟ್ಟು ಹೋಗಿದ್ದಳು
ಅಂಗಡಿಯಲ್ಲಿ ಸ್ಟಾಕ್ ಚೆಕ್ ಮಾಡುವಾಗ ವ್ಯತ್ಯಾಸ ಕಂಡು ಬಂದಿತ್ತು. ಹಾಗಾಗಿ ಮಾಲೀಕ ವಿನೋದ್ ಪಾಟೀಲ್ ಅವರು ಸಿಸಿಟಿವಿ ಪರಿಶೀಲಿಸಿದ್ದರು. ಡಿ.9ರಂದು ಸಂಜೆ ಮಹಿಳೆಯೊಬ್ಬರು ಉಂಗುರ ಖರೀದಿಗೆಂದು ಬಂದಿದ್ದರು. ಅಂಗಡಿಯಲ್ಲಿದ್ದ ಹುಡುಗ ಉಂಗುರಗಳನ್ನು ತೋರಿಸಿದ್ದರು. ಟ್ರೇನಲ್ಲಿದ್ದ ಒಂದು ಉಂಗುರವನ್ನು ಮಹಿಳೆ ಕೈಗೆತ್ತಿಕೊಂಡು ಬೆಲೆ ಕೇಳಿದ್ದಳು.
ಇದನ್ನೂ ಓದಿ » ಸಕ್ರೆಬೈಲು ಬಳಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ದೊಡ್ಡ ಅನಾಹುತ
ಅಂಗಡಿಯ ಹುಡುಗ ಮಲೀಕರ ಬಳಿ ಬೆಲೆ ಕೇಳಲು ತಿರುಗಿದಾಗ ಮಹಿಳೆ ತಾನು ತಂದಿದ್ದ ನಕಲಿ ಚಿನ್ನದ ಉಂಗುರವನ್ನು ಟ್ರೇನಲ್ಲಿಟ್ಟಳು. ಬಳಿಕ ಉಂಗುರ ಖರೀದಿಸದೆ ಹೊರ ನಡೆದಿದ್ದಳು. ಮಹಿಳೆಗೆ 25 ರಿಂದ 28 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.