SHIVAMOGGA LIVE NEWS, 7 FEBRUARY 2025
ಶಿವಮೊಗ್ಗ : ಪಾರ್ಟ್ ಟೈಮ್ ಉದ್ಯೋಗ ಮಾಡಿ ಪ್ರತಿದಿನ ಒಂದರಿಂದ ಎರಡು ಸಾವಿರ ರೂ.ವರೆಗೆ ಆದಾಯ (Income) ಗಳಿಸಬಹುದು ಎಂದು ನಂಬಿಸಿ ಮಹಿಳೆಗೆ 5.90 ಲಕ್ಷ ರೂ. ವಂಚಿಸಲಾಗಿದೆ. ಮಹಿಳೆಯೊಬ್ಬರು ಹಣ ಕಳೆದುಕೊಂಡಿರುವುದಾಗಿ ಆರೋಪಿಸಿ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಂಚನೆ ಆಗಿದ್ದು ಹೇಗೆ?
ಶಿವಮೊಗ್ಗದ ಮಹಿಳೆ (ಹೆಸರು ಗೌಪ್ಯ) ಇನ್ಸ್ಟಾಗ್ರಾಂ ನೋಡುತ್ತಿದ್ದಾಗ ಪಾರ್ಟ್ ಟೈಮ್ ಜಾಬ್ ಜಾಹೀರಾತು ಗಮನಿಸಿದ್ದರು. ಅದರ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ಓಪನ್ ಆಗಿತ್ತು. ನಂತರ ವಿಡಿಯೋ ವೀಕ್ಷಿಸಿ ಆದಾಯ ಗಳಿಸಿ ಎಂದು ತಿಳಿಸಿ ಮಹಿಳೆಯನ್ನು ಟೆಲಿಗ್ರಾಂ ಗ್ರೂಪ್ಗೆ ಸೇರಿಸಲಾಗಿತ್ತು. ಟಾಸ್ಕ್ ಪೂರೈಸಿ ಹಣ ಸಂಪಾದಿಸಬಹುದು ಎಂದು ತಿಳಿಸಲಾಗಿತ್ತು. ಮೊದಲ ದಿನ ಮಹಿಳೆಗೆ ವಿವಿಧ ಟಾಸ್ಕ್ ನೀಡಿಲಾಗಿತ್ತು. ಟಾಸ್ಕ್ ಪೂರೈಸಿದ ನಂತರ 1200 ರೂ. ಹಣವನ್ನು ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು.
ಆಸೆ ಹುಟ್ಟಿಸಿ, ನಂಬಿಸಿ ಟೋಪಿ ಹಾಕಿದರು
ಮರುದಿನ ವಿವಿಧ ಟಾಸ್ಕ್ಗಳನ್ನು ನೀಡಿ, ಹೆಚ್ಚಿನ ಆದಾಯ ಗಳಿಸಬಹುದು ಎಂದು ಆಸೆ ಹುಟ್ಟಿಸಲಾಯಿತು. ಈ ಟಾಸ್ಕ್ ಪೂರೈಸಲು ಹಣ ಹೂಡಿಕೆ ಮಾಡಬೇಕು. ಟಾಸ್ಕ್ ಮುಗಿದ ಮೇಲೆ ಲಾಭಾಂಶದ ಜೊತೆಗೆ ಈ ಹಣವನ್ನೂ ಹಿಂತಿರುಗಿಸಲಾಗುತ್ತದೆ ಎಂದು ಟೆಲಿಗ್ರಾಂ ಮೂಲಕವೆ ನಂಬಿಸಲಾಯಿತು. ಹಾಗಾಗಿ ಮಹಿಳೆ ಹಂತ ಹಂತವಾಗಿ 2.93 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಸ್ವಲ್ಪ ಸಮಯದ ಬಳಿಕ ತಮ್ಮ ಹಣ ಹಿಂತಿರುಗಿಸುವಂತೆ ಮಹಿಳೆ ಮನವಿ ಮಾಡಿದಾಗ, ನಿಮ್ಮ ಅಕೌಂಟ್ ಫ್ರೀಜ್ ಆಗಿದೆ ಎಂದು ಟೆಲಿಗ್ರಾಂನಲ್ಲಿ ತಿಳಿಸಲಾಗಿತ್ತು.
ಪುನಃ ಎರಡು ಲಕ್ಷ ರೂ. ಹೂಡಿಕೆ ಮಾಡಿದರೆ ಫ್ರೀಜ್ ಆಗಿರುವ ಅಕೌಂಟ್ನಿಂದ ಹಣ ಬಿಡಿಸಿ ಕೊಡುತ್ತೇವೆ ಎಂದು ಮಹಿಳೆಗೆ ನಂಬಿಸಲಾಯಿತು. ಆದ್ದರಿಂದ ಮಹಿಳೆ 2 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆ ಬಳಿಕ ನಿಮ್ಮ ಹಣಕ್ಕೆ ಶೇ.30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಟೆಲಿಗ್ರಾಂನಲ್ಲಿ ಹೊಸ ಸಬೂಬು ಹೇಳಲು ಆರಂಭಿಸಿದರು. ಆಗ ಅನುಮಾನಗೊಂಡ ಮಹಿಳೆ ಪರಿಚಿತರಲ್ಲಿ ವಿಷಯ ತಿಳಿಸಿದ್ದಾರೆ. ವಂಚನೆಗೊಳಗಾದ ವಿಷಯ ತಿಳಿಯುತ್ತಲೆ ಸಿ.ಇ.ಎನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ » ಜಿಂಕೆಗೆ ಡಿಕ್ಕಿ ತಪ್ಪಿಸಲು ಹೋಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200