ಶಿವಮೊಗ್ಗದಲ್ಲಿ ರೈಲ್ವೆ ಹಳಿ ಮೇಲೆ ಯುವತಿ ಮೃತದೇಹ, ಸಾವಿನ ಕುರಿತು ಅನುಮಾನ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ನಗರದ ರವೀಂದ್ರ ನಗರದ ಬಳಿ ಇರುವ ರೈಲ್ವೆ ಹಳಿ (railway track) ಮೇಲೆ ಅಪರಿಚಿತ ಯುವತಿಯೊಬ್ಬಳ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಂಜೆ ಸುಮಾರು 5 ಗಂಟೆಯ ವೇಳೆಗೆ ರೈಲ್ವೆ ಇಲಾಖೆಯ ಸಿಬ್ಬಂದಿ ಹಳಿಯ ಮೇಲೆ ಮೃತದೇಹ ಇರುವುದನ್ನು ಗಮನಿಸಿ, ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Ravindra-Nagara-Railway-Track-incident

ಇದನ್ನೂ ಓದಿ : ಆರು ವರ್ಷದ ಬಳಿಕ ಶಿವಮೊಗ್ಗದಲ್ಲಿ ವ್ಯಕ್ತಿ ಅರೆಸ್ಟ್‌, ಜೈಲುಪಾಲು, ಕಾರಣವೇನು?

ಯುವತಿಯು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಈ ಸಾವಿನ ಹಿಂದೆ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Ravindra-Nagara-Railway-Track-incident

ರೈಲು ಡಿಕ್ಕಿ, ಯುವಕ ಸಾವು

ಮತ್ತೊಂದು ಪ್ರಕರಣದಲ್ಲಿ ನಗರದ ಪಶುವೈದ್ಯಕೀಯ ಕಾಲೇಜು ಸಮೀಪ ಭಾನುವಾರ ರಾತ್ರಿ ರೈಲು ಡಿಕ್ಕಿ ಹೊಡೆದು 30 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಯುವಕ ಏಕಾಏಕಿ ಎದುರಿಗೆ ಬಂದಿದ್ದು, ರೈಲು ಡಿಕ್ಕಿ ಹೊಡೆದಿದೆ. ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಪರಿಚಯ ತಿಳಿದುಬಂದಿಲ್ಲ. ಇವರ ಬಲಗೈ ಮೇಲೆ ತ್ರಿಶೂಲದ ಚಿಹ್ನೆ ಇದ್ದು, ಜೀನ್ಸ್ ಪ್ಯಾಂಟ್ ಮತ್ತು ಅಂಗಿಯನ್ನು ತೊಟ್ಟಿದ್ದಾರೆ. ಗುರುತು ಪತ್ತೆಯಾದರೆ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‌ಪೆಕ್ಟ‌ರ್ 08182 222974 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ Shimoga News, Shivamogga News ಮತ್ತು CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 15, 2026

Leave a Comment