SHIVAMOGGA LIVE NEWS | 1 DECEMBER 2024
ಶಿವಮೊಗ್ಗ : ಮನೆಯಲ್ಲಿ ಯಾರೂ ಇಲ್ಲಾದಾಗ ಬಟ್ಟೆ ಹೊಲಿಯುವ ಮೆಷಿನ್ (Machine), ಮೋಟರ್ ಮತ್ತು ಬಟ್ಟೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಶಿವಮೊಗ್ಗ ನಗರದ ಮಾರ್ನಮಿಬೈಲು ಜೆ.ಸಿ.ನಗರದ ಮಂಜುಳಾ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಮಂಜುಳಾ ಅವರು ಧರ್ಮಸ್ಥಳ ಸಂಘಕ್ಕೆ ಹಣ ಕಟ್ಟಲು ತೆರಳಿದ್ದರು. ಅವರ ಮಗ ಕೆಲಸಕ್ಕೆ ಹೋಗಿದ್ದ. ನೆರೆಹೊರೆಯವರು ಕರೆ ಮಾಡಿ ಮನೆಗೆ ಬೆಂಕಿ ಬಿದ್ದಿದೆ ಎಂದು ತಿಳಿಸಿದ್ದು, ಬೆಂಕಿ ನಂದಿಸಿದ್ದರು. ಮಂಜುಳಾ ಅವರು ಮನೆಗೆ ದೌಡಾಯಿಸಿದ್ದು ಬಟ್ಟೆ ಹೊಲಿದು ಕೊಡುವಂತೆ ಗ್ರಾಹಕರು ಕೊಟ್ಟಿದ್ದ ದುಬಾರಿ ಬಟ್ಟೆಗಳು, ಮೆಷಿನ್ ಮತ್ತು ಅದಕ್ಕೆ ಅಳವಡಿಸಿದ್ದ ಮೋಟರ್ ಸುಟ್ಟು ಹೋಗಿದ್ದವು ಎಂದು ಆರೋಪಿಸಲಾಗಿದೆ.
ಕಳೆದ ಜುಲೈನಲ್ಲಿಯು ಇದೇ ರೀತಿ ಕೃತ್ಯ ನಡೆದಿತ್ತು. ಇನ್ನು, ಕಿಡಿಗೇಡಿಗಳು ಆಗಾಗ ಮನೆ ಮೇಲೆ ಕಲ್ಲು ಎಸೆಯುತ್ತಿದ್ದಾರೆ ಎಂದು ಮಂಜುಳಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 71 ಸಾವಿರ ರೈತರ ಖಾತೆಗೆ ವಿಮೆ ಪರಿಹಾರ