SHIVAMOGGA LIVE NEWS | 16 AUGUST 2023
SHIMOGA : ಪಾರ್ಟ್ ಟೈಮ್ ಉದ್ಯೋಗ (Job) ಹುಡುಕುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ (Software Engineer) ಒಬ್ಬರು ಆನ್ಲೈನ್ (Online) ವಂಚಕರ ಬಲೆಗೆ ಬಿದ್ದು 29 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ವಿಡಿಯೋ ಲೈಕ್ ಮಾಡಿ, ಷೇರ್ ಮಾಡಿ ಹಣ ಗಳಿಸಿ ಎಂದು ನಂಬಿಸಿ, ಬಳಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.
![]() |
ಹೇಗಾಯ್ತು ವಂಚನೆ?
ಶಿವಮೊಗ್ಗ ಜಿಲ್ಲೆಯ ಸಾಫ್ಟ್ ವೇರ್ ಇಂಜಿನಿಯರ್ (ಹೆಸರು, ಊರು ಗೌಪ್ಯ) ಒಬ್ಬರು ಪಾರ್ಟ್ ಟೈಮ್ ಉದ್ಯೋಗಕ್ಕಾಗಿ ಆನ್ಲೈನ್ನಲ್ಲಿ ಸರ್ಚ್ ಮಾಡಿದ್ದರು. ಮರುದಿನ ಅವರ ವಾಟ್ಸಪ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಮೆಸೇಜ್ ಮಾಡಿದ್ದು, ಅಮೇಜಾನ್ (Amazon) ಆನ್ಲೈನ್ ಪಾರ್ಟ್ ಟೈಮ್ ಪೊಸಿಷನಿಂಗ್ ಜಾಬ್ನ ಕಾರ್ಟ್ಗೆ ಸೇರಿಕೊಂಡು ಹಣ ಗಳಿಸಬಹುದು ಎಂದು ಲಿಂಕ್ ಕಳುಹಿಸಿದ್ದ. ಆ ಲಿಂಕ್ ಕ್ಲಿಕ್ ಮಾಡಿದಾಗ ಸಾಫ್ಟ್ವೇರ್ ಇಂಜಿನಿಯರ್ಗೆ ಟೆಲಿಗ್ರಾಂ ಆಪ್ನಲ್ಲಿ ಕೃತ್ತಿಕಾ ಗುಪ್ತಾ ಎಂಬ ಹೆಸರಿನ ಅಕೌಂಟ್ ಓಪನ್ ಆಗಿತ್ತು. ಅದರಿಂದ ಯು ಟ್ಯೂಬ್ ಲಿಂಕ್ ಕಳುಹಿಸಿ ಲೈಕ್ ಮತ್ತು ಷೇರ್ ಮಾಡುವಂತೆ ಸೂಚಿಸಿದ್ದರು. ಟಾಸ್ಕ್ ಪೂರೈಸಿದ್ದಕ್ಕೆ 300 ರೂ. ಹಣ ವರ್ಗಾಯಿಸಿದ್ದರು.
ಇದನ್ನೂ ಓದಿ- SHIMOGA JOBS – ಶಿವಮೊಗ್ಗದಲ್ಲಿ 16 ರಿಂದ 18 ಸಾವಿರ ರೂ. ಸಂಬಳದ ಕೆಲಸ ಖಾಲಿ ಇದೆ
ಆಸೆ ತೋರಿಸಿ ವರಸೆ ಬದಲಿಸಿದರು
ಜು.30ರಂದು ಪುನಃ ಮೆಸೇಜ್ ಮಾಡಿದ ಅಪರಿಚಿತ ವ್ಯಕ್ತಿ ಪ್ರೀ ಪೇಡ್ ಟಾಸ್ಕ್ಗಳನ್ನು ಆರಂಭಿಸುವುದಾಗಿ ತಿಳಿಸಿದರು. 1000 ರೂ. ಹಣ ವರ್ಗಾಯಿಸಿ ಟಾಸ್ಕ್ ಪೂರೈಸಿದ್ದಕ್ಕೆ 1300 ರೂ. ಹಣ ಹಿಂತಿರುಗಿಸಿದ್ದರು. ಬಳಿಕ 5000 ರೂ. ಹಾಕುವಂತೆ ತಿಳಿಸಿ 5000 ರೂ.ಗಳನ್ನು ಮರಳಿಸಿದ್ದರು. ಅದೇ ರೀತಿ 37 ಸಾವಿರ ರೂ. ಹಾಕುವಂತೆ ತಿಳಿಸಿದ್ದು 59,800 ರೂ. ಹಣ ಹಿಂತಿರುಗಿಸಿದ್ದರು. ಹೆಚ್ಚಿಗೆ ಹಣ ಮರಳಿಸಿ ಸಾಫ್ಟ್ ವೇರ್ ಇಂಜಿನಿಯರ್ಗೆ ನಂಬಿಕೆ ಮೂಡಿಸಿ ಜು.31 ರಿಂದ ಆ.12ರವರೆಗೆ ವಿವಿಧ ಹಂತದಲ್ಲಿ 29,44,370 ರೂ. ಹಣ ವರ್ಗಾಯಿಸಿಕೊಂಡಿದ್ದಾರೆ. ಆದರೆ ಹಣ ಹಿಂತಿರುಗಿಸಿಲ್ಲ.
ವಂಚನೆಗೊಳಗಾಗಿರುವುದು ಗೊತ್ತಾದ ಕೂಡಲೆ ಸಾಫ್ಟ್ ವೇರ್ ಇಂಜಿನಿಯರ್ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ-ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಹುಂಡಿ, ದೇವಿಯ ಮೂರ್ತಿ ಕಳ್ಳತನಕ್ಕೆ ಯತ್ನ
ಆನ್ಲೈನ್ ವ್ಯವಹಾರ, ಇರಲಿ ಎಚ್ಚರ
ಆನ್ಲೈನ್ ಮೂಲಕ ಹಣ ವರ್ಗಾಯಿಸುವಾಗ ಜನರು ಎಚ್ಚರ ವಹಿಸಬೇಕಿದೆ. ಗುರುತು ಪರಿಚಯ ಇಲ್ಲದವರ ಜೊತೆಗೆ ಹಣಕಾಸು ವ್ಯವಹಾರ ನಡೆಸದಿರುವುದು ಸೂಕ್ತ. ದೊಡ್ಡ ಮೊತ್ತದ ಹಣ ವರ್ಗಾಯಿಸುವಾಗ ಮರು ಯೋಚನೆ ಮಾಡಿದರೆ ಸಂಕಷ್ಟದಿಂದ ಪಾರಾಗಬಹುದು. ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ಹಲವು ಬಗೆಯಲ್ಲಿ ವಂಚನೆ ಮಾಡಲಾಗುತ್ತಿದೆ. ಉದ್ಯೋಗ ಕೊಡುವವರು ಹಣ ಪಡೆಯುವುದಿಲ್ಲ. ಟಾಸ್ಕ್ ಪೂರೈಸಿ ಹಣ ಪಡೆಯಿರಿ ಎಂದು ನಂಬಿಸಿ ವಂಚಿಸುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200