ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 8 MAY 2024
SHIMOGA : ಲಷ್ಕರ್ ಮೊಹಲ್ಲಾದಲ್ಲಿ ನಡೆದ ಡಬಲ್ ಮರ್ಡರ್ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಎಸ್‌ಪಿ ಹೇಳಿದ್ದೇನು?
‘ಸಂಜೆ 5.30ರ ಹೊತ್ತಿಗೆ ಸ್ಥಳೀಯ ವ್ಯಕ್ತಿಯೊಬ್ಬನ ಮೇಲೆ ಹೊರಗಿನಿಂದ ಬಂದ ಯುವಕರು ಹಲ್ಲೆ ನಡೆಸಿದರು. ಈ ವೇಳೆ ಸ್ಥಳೀಯ ವ್ಯಕ್ತಿಯ ಸ್ನೇಹಿತರು ಹಲ್ಲೆಕೋರರ ಮೇಲೆ ದಾಳಿ ನಡೆಸಿದರು. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿ, ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆ ಮಾಡಿದ್ದಾರೆ. ಸುಹೇಲ್ ಅಲಿಯಾಸ್ ಖಲಂದರ್ ಅಲಿಯಸ್ ಸೇಬು ಮತ್ತು ಗೌಸ್ ಎಂಬುವವರು ಹತ್ಯೆಯಾಗಿದ್ದಾರೆ. ಈ ಪೈಕಿ ಒಬ್ಬಾತ ಕೆ.ಆರ್.ಪುರಂ ನಿವಾಸಿ. ಮತ್ತೊಬ್ಬ ಅಣ್ಣಾನಗರದವನು. ಆರೋಪಿಗಳ ಗುರುತು ಪತ್ತೆಯಾಗಿದೆ, ಬಂಧಿಸಲಾಗುತ್ತದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡು ರಸ್ತೆಯಲ್ಲಿ ಇಬ್ಬರ ಭೀಕರ ಹತ್ಯೆ
LATEST NEWS
- ದಿಢೀರ್ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದ ಕಾಡುಕೋಣ

- ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 10 ಫೆಬ್ರವರಿ 2026

- ಶಿವಮೊಗ್ಗ ವಿಮಾನ ನಿಲ್ದಾಣ, ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂಸದ ರಾಘವೇಂದ್ರ

- ಶಿವಮೊಗ್ಗದಲ್ಲಿ ಉಚಿತ ಆರ್ಯುವೇದ ಆರೋಗ್ಯ ತಪಾಸಣಾ ಶಿಬಿರ, ಈಗಲೇ ಹೆಸರು ನೋಂದಣಿಗೆ ಸೂಚನೆ

- ಶಿವಮೊಗ್ಗ ಕೋಟೆ ಮಾರಿಕಾಂಬಾ ಜಾತ್ರೆ ಸಿದ್ಧತೆ ಜೋರು, ಪ್ರಚಾರ ಶುರು

About The Editor
ನಿತಿನ್ ಆರ್.ಕೈದೊಟ್ಲು






