ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | STONE PELTING | 09 ಮೇ 2022
ಕಾರಿನ ಗಾಜು ಒಡೆದ ಪ್ರಕರಣದ ಬೆನ್ನಿಗೆ ಶಿವಮೊಗ್ಗದ ಸೂಳೆಬೈಲಿನ ಹಲವು ಮನೆಗಳ ಮೇಲೆ ಕಲ್ಲು ತೂರಲಾಗಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಮನೆಗಳ ಗಾಜು ಪುಡಿ ಪುಡಿಯಾಗಿದೆ.
ಸೂಳೆಬೈಲು ಸಮೀಪದ ಇಂದಿರಾನಗರದ ತೀರ್ಥಪ್ಪನ ಕ್ಯಾಂಪ್ ನಿವಾಸಿ ಹಫೀಜ್ ಉಲ್ಲಾ (21) ಎಂಬುವವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಅವರ ಮಾವನ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ.
ಘಟನೆ ವಿವರ
ಮೇ 6ರ ರಾತ್ರಿ ಮತ್ತೂರಿಗೆ ತೆರಳುತ್ತಿದ್ದ ಕಾರಿನ ಹಿಂಬದಿ ಗಾಜು ಒಡೆಯಲಾಗಿತ್ತು. ಇದರಿಂದ ಸೂಳೆಬೈಲು ಬಡಾವಣೆಯಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸೂಳೆಬೈಲಿನ ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ – ಕಲ್ಲು ಬಿದ್ದ ಕಾರಿನಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣ ಇದ್ದರಾ? | 5 ಪಾಯಿಂಟ್ ನ್ಯೂಸ್
ಹಫೀಜ್ ಉಲ್ಲಾ ಎಂಬುವವರು ತಮ್ಮ ಮಾವನ ಮನೆಯಲ್ಲಿ ಪೇಂಟಿಂಗ್ ಕೆಲಸ ಮುಗಿಸಿ ಕೈ ತೊಳೆಯುತ್ತಿದ್ದರು. ಈ ವೇಳೆ ಮತ್ತೂರಿಗೆ ತೆರಳುತ್ತಿದ್ದ 20 ರಿಂದ 25 ಜನರಿದ್ದ ಗುಂಪೊಂದು ಹಫೀಜ್ ಉಲ್ಲಾ ಅವರ ಮಾವನ ಮನೆ ಮೇಲೆ ದಾಳಿ ನಡೆಸಿದೆ. ಮನೆ ಮೇಲೆ ಕಲ್ಲು ತೂರಿದ್ದಾರೆ. ಅಲ್ಲದೆ ಕಲ್ಲು, ದೊಣ್ಣೆಯಿಂದ ಹಫೀಜ್ ಉಲ್ಲಾ ಅವರಿಗೆ ಹೊಡೆದಿದ್ದಾರೆ.
ಇದನ್ನೂ ಓದಿ – ಕಾರಿನ ಗಾಜು ಒಡೆದ ಕೇಸ್, ಒಬ್ಬ ಅರೆಸ್ಟ್, ಯಾರದು?
ಈ ಸಂದರ್ಭ ಹಫೀಜ್ ಉಲ್ಲಾ ಅವರ ಮಾವಂದಿರು ಬಿಡಿಸಲು ಬಂದಾಗ, ದಾಳಿಕೋರರು ಓಡಿ ಹೋಗಿದ್ದಾರೆ. ದಾಳಿ ನಡೆಸಿದವರಲ್ಲಿ ಮತ್ತೂರಿನ ವಾಸಿಗಳಾದ ಕಾರ್ತಿಕ್ ಮತ್ತು ಕುಮಾರ್ ಎಂಬುವವರನ್ನು ಗುರುತಿಸಿದ್ದಾರೆ. ಇವರ ಜೊತೆಗೆ ಇತರೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ.
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422