ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 APRIL 2023
SHIMOGA : ನಾಯಿಯೊಂದು ನವಜಾತ ಹೆಣ್ಣು ಶಿಶುವನ್ನು (New Born) ಕಚ್ಚಿಕೊಂಡು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಓಡಾಡಿದೆ. ಸಾರ್ವಜನಿಕರು, ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ಶಿಶುವನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ.
ನಾಯಿ ಬಾಯಲ್ಲಿ ನವಜಾತ ಶಿಶು
ಬೆಳಗಿನ ಜಾವ ನಾಯಿಯೊಂದು ನವಜಾತ (New Born) ಶಿಶುವನ್ನು ಕಚ್ಚಿಕೊಂಡು, ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಬಳಿ ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಪರಿಶೀಲಿಸಿದ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿ, ನವಜಾತ ಹೆಣ್ಣು ಶಿಶುವನ್ನು ಹೆರಿಗೆ ವಾರ್ಡ್ ಗೆ ಕೊಂಡೊಯ್ದು ಪರೀಕ್ಷಿಸಿದ್ದಾರೆ. ಆಗ ಮಗು ಮೃತಪಟ್ಟಿರುವುದು ಗೊತ್ತಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರದ್ದು ಈ ಮಗು?
ಮಾ.31ರಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಆಗಷ್ಟೆ ಹುಟ್ಟಿದ ಮಗುವನ್ನು ಯಾರೋ ಮೆಗ್ಗಾನ್ ಆಸ್ಪತ್ರೆ ಮಕ್ಕಳ ವಾಡ್ ಹಿಂಭಾಗ ಬಿಟ್ಟು ಹೋಗಿರುವ ಶಂಕೆ ಇದೆ. ಮಗು ಮೃತಪಟ್ಟಿದ್ದು, ನಾಯಿ ಕಚ್ಚಿಕೊಂಡು ಓಡಾಡಿದೆ. ಮಗುವನ್ನು ಅಲ್ಲಿ ಬಿಟ್ಟು ಹೋದ ತಂದೆ, ತಾಯಿ ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೆಗ್ಗಾನ್ ಆಸ್ಪತ್ರೆ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಯಾರಿಗೂ ಗೊತ್ತಾಗದಂತೆ ಫೇಸ್ ಬುಕ್ಕಿನಲ್ಲಿ ವಿಡಿಯೋ ಅಪ್ಲೋಡ್, ಯುವಕನ ಮನೆ ಬಾಗಿಲಿಗೆ ತಲುಪಿದರು ಸೈಬರ್ ಪೊಲೀಸ್