ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಜುಲೈ 2019
ರಿಯಲ್ ಎಸ್ಟೇಟ್ ಉದ್ಯಮಿ ಎದೆಗೆ ರಿವಾಲ್ವರ್ ಇಟ್ಟು, ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದ ಪ್ರಕರಣ ಸಂಬಂಧ, ಶಿವಮೊಗ್ಗ ಪೊಲಿಸರು ಐದು ಜನರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ರಿವಾಲ್ವರ್ ಮತ್ತು ಒಂದು ಗುಂಡು ವಶಕ್ಕೆ ಪಡೆಯಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆ ಮಾಡಲು, ಐವರು ಸುಪಾರಿ ಕಿಲ್ಲರ್’ಗಳು ಸಂಚು ರೂಪಿಸಿದ್ದರು. ಜುಲೈ 16ರಂದು ರಾತ್ರಿ ಚಾಲುಕ್ಯ ನಗರದ ಬಳಿ, ಹಬೀಬ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ರಿವಾಲ್ವರ್ ತಲೆಗಿಟ್ಟು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಹಬೀಬ್ ಹತ್ಯೆಗೆ ಸುಪಾರಿ ಕೊಟ್ಟಿದ್ಯಾರು?

ಉದ್ಯಮಿ ಹೆವನ್ ಇನ್ ಹಬೀಬ್ ಹತ್ಯೆಗೆ ಕಲೀಂವುಲ್ಲಾ ಎಂಬಾತ ಸುಪಾರಿ ನೀಡಿದ್ದ. ‘ಹಬೀಬ್ ಮತ್ತು ಕಲೀಂವುಲ್ಲಾ ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದರು. ಹಣಕಾಸು ವಿಚಾರವಾಗಿ ಇಬ್ಬರ ನಡುವೆ ತಕರಾರು ಉಂಟಾಗಿತ್ತು. ಇದೇ ವಿವಾದ ಸಂಬಂಧ, ಹಬೀಬ್ ಹತ್ಯಗೆ ಕಲೀಂವುಲ್ಲಾ ಸುಪಾರಿ ನೀಡಿದ್ದ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ ತಿಳಿಸಿದ್ದಾರೆ.

ಸುಪಾರಿ ಪಡೆದವರು ಅರೆಸ್ಟ್
ಹಬೀಬ್ ಹತ್ಯಗೆ ಸಾತು ಮತ್ತು ಗ್ಯಾಂಗ್’ಗೆ ಕಲೀಂವುಲ್ಲಾ ಸುಪಾರಿ ನೀಡಿದ್ದ. ಆದರೆ ಹಬೀಬ್ ಅವರ ಹತ್ಯೆಗೆ ವಿಫಲ ಯತ್ನ ನಡೆಸಲಾಗಿತ್ತು. ಈ ಸಂಬಂಧ ಉದ್ಯಮಿ ಹಬೀಬ್ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ.

ಸಾಧಿಕ್ ಅಲಿಯಾಸ್ ಸಾತು, ಶಿವಮೊಗ್ಗದ ಅತೀಕ್, ಬಳ್ಳಾರಿಯ ದಾದಾಪೀರ್, ಮುಂಬೈನ ಆಂಜೋಲಾ ಫರ್ನಾಂಡೀಸ್, ಮಂಡ್ಯದ ಕುಮಾರ್ ಗೌಡ ಬಂಧಿತರು.

ಇದೇ ಆರೋಪಿಗಳು ಜುಲೈ 17ರಂದು ಗಾಂಧಿ ಬಜಾರ್’ನ ಚಿನ್ನದ ಅಂಗಡಿ ಮಾಲೀಕನನ್ನು ಕಿಡ್ನಾಪ್ ಮಾಡಿ, ಆತನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಡಿಸಿಬಿ, ಸಿಇಎನ್, ತುಂಗಾನಗರ ಮತ್ತು ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇನ್ನು, ಈ ಪ್ರಕರಣ ಸಂಬಂಧ ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]