ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಸೆಪ್ಟೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ದುಬೈನಿಂದ ವಾಟ್ಸಪ್ ಮೂಲಕ ತಲಾಖ್.. ತಲಾಖ್.. ತಲಾಖ್ ಅಂತಾ ಹೇಳಿ, ವಿಚ್ಛೇದನ ನೀಡಿರುವ ಪತಿ ವಿರುದ್ಧ ಪತ್ನಿ ತಿರುಗಿಬಿದ್ದಿದ್ದಾರೆ. ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತ್ರಿವಳಿ ತಲಾಖ್ ನಿಷೇಧದ ಬಳಿಕ ಶಿವಮೊಗ್ಗದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಏನಿದು ಪ್ರಕರಣ? ತಲಾಖ್’ಗೆ ಕಾರಣವೇನು?
21 ವರ್ಷ ಸಂಸಾರ ನಡೆಸಿದ ಪತಿರಾಯ ಪತ್ನಿಗೆ ವಾಟ್ಸಾಪ್ ಮೂಲಕ ಮೂರು ಬಾರಿ ತಲಾಕ್ ನೀಡಿದ್ದಾನೆ. ಇದರಿಂದ ನೊಂದ ಪತ್ನಿ ನ್ಯಾಯ ಕೊಡಿಸುವಂತೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿಯಾಗಿರುವ ಮಹಿಳೆಗೆ ಅದೇ ಬಡಾವಣೆಯ ಮುಸ್ತಫಾ ಬೇಗ್ ಜತೆ ಪ್ರೀತಿ ಬೆಳೆದು 21 ವರ್ಷದ ಹಿಂದೆ ಮದುವೆಯಾಗಿದ್ದರು. ದುಬೈನಲ್ಲಿ ಸಿಸಿ ಕ್ಯಾಮರಾ, ಲ್ಯಾಟ್ಟಾಪ್ ಟೆಕ್ನಿಷಿಯನ್ ಆಗಿರುವ ಮುಸ್ತಫಾ ವರ್ಷಕ್ಕೆ ಎರಡು ಬಾರಿ ಪತ್ನಿ ಹಾಗೂ ದತ್ತು ಮಗಳನ್ನು ನೋಡಲು ಬರುತ್ತಿದ್ದ. ಜತೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ಈ ವರ್ಷ ಜನವರಿಯಲ್ಲಿ ಭಾರತಕ್ಕೆ ಬಂದು ವಾಪಾಸ್ ಹೋದಮೇಲೆ ವಾಟ್ಸಾಪ್ ಮೂಲಕ ಪತ್ನಿಗೆ ತಲಾಕ್ ಸಂದೇಶ ಕಳುಹಿಸಿದ್ದಾನೆ. ಇದನ್ನೆಲ್ಲ ಒಪ್ಪದ ಪತ್ನಿ ಮಾತು ಮುಂದುವರೆಸಲು ಪ್ರಯತ್ನಿಸಿದಾಗ ಮತ್ತೆರಡು ಬಾರಿ ತಲಾಕ್ ಸಂದೇಶ ತಿಳಿಸಿದ್ದಾನೆ. ಪತಿಗೆ ತಲಾಕ್ ನೀಡಬೇಡಿ ಎಂದು ಅಂಗಲಾಚಿದರೂ ಕೇಳಲಿಲ್ಲ. ಭಾರತದಲ್ಲಿ ತಲಾಕ್ ಪದ್ಧತಿ ನಿಷೇಧವಿದೆ ಎಂದು ಹೇಳಿ ಪತ್ನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೋದಿ ಅವರಿಗೆ ಟ್ವೀಟ್, ಭೇಟಿಗೆ ಪ್ಲಾನ್
16 ವರ್ಷದ ಹಿಂದೆ ಮಗಳನ್ನು ದತ್ತು ಪಡೆಯಲಾಗಿತ್ತು. ಮಗಳ ಶಿಕ್ಷಣಕ್ಕೆ ಹೆಚ್ಚಿನ ಹಣ ಕೇಳಿದ್ದೆ, ಅವರ ಸಂಬಂಧಿಕರು ನಮ್ಮ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತಲಾಕ್ ನೀಡುವಂತೆ ಮಾಡಿದ್ದಾರೆ. ಮೋದಿ ಅವರು ತಲಾಕ್ ನಿಷೇಧ ಕಾನೂನು ಜಾರಿಗೆ ತಂದಿದ್ದಾರೆ. ನಾನು ಅವರಿಗೆ ಟ್ವೀಟ್ ಮಾಡಿ ಅವರನ್ನೂ ಭೇಟಿ ಮಾಡುವೆ ಎಂದು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]