ಶಿವಮೊಗ್ಗದ ಶಿಕ್ಷಕಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?

ಶಿವಮೊಗ್ಗ: ಹೆಚ್ಚುವರಿ ಅದಾಯ, ಅಧಿಕ ಲಾಭದ ಆಮಿಷವೊಡ್ಡಿ ಸೈಬರ್‌ ವಂಚಕರು ನಿತ್ಯ ಹಲವರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ. ಹೊಟೇಲ್‌ಗಳಿಗೆ ರಿವ್ಯು (Hotel Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ₹11.35 ಲಕ್ಷ ವಂಚಿಸಲಾಗಿದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಗೆ ವಾಟ್ಸಪ್‌ಗೆ ಹೊಟೇಲ್‌ ರಿವ್ಯು ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಲಿಂಕ್‌ ಜೊತೆ ಅಪರಿಚತ ನಂಬರ್‌ನಿಂದ ಮೆಸೇಜ್‌ ಬಂದಿತ್ತು. ಲಿಂಕ್‌ ಕ್ಲಿಕ್‌ ಮಾಡಿದಾಗ ಟೆಲಿಗ್ರಾಂ ಆಪ್‌ನಲ್ಲಿ ಗ್ರೂಪ್‌ ಒಂದಕ್ಕೆ ಜಾಯಿನ್‌ ಮಾಡಲಾಯಿತು. ಹಣ ಕಟ್ಟಿ ರಿವ್ಯು ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಶಿಕ್ಷಕಿಗೆ ನಂಬಿಸಲಾಯಿತು.

ಇದನ್ನೂ ಓದಿ » ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು, ಈತ ಮಾಡಿದ ಅಪರಾಧವೇನು?ಅ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಗ್ರೂಪ್‌ನಲ್ಲಿ ತಿಳಿಸಿದಂತೆ ಶಿಕ್ಷಕಿ ಹಂತ ಹಂತವಾಗಿ ₹11.35 ಲಕ್ಷ ಹಣ ಕಟ್ಟಿ ರಿವ್ಯು ನೀಡಿದ್ದರು. ತಮ್ಮ ಲಾಭಾಂಶದ ಹಣ ಡ್ರಾ ಮಾಡಲು ಹೋದಾಗ ₹6 ಲಕ್ಷ ಹಣ ಕಟ್ಟಬೇಕು. ಇದಕ್ಕೆ ಒಂದು ದಿನದ ಕಾಲವಕಾಶವಿರಲಿದೆ ಎಂದು ಗ್ರೂಪ್‌ನಲ್ಲಿ ತಿಳಿಸಲಾಯಿತು. ಆಗ ವಂಚನೆಗೊಳಗಾಗಿರುವುದು ಮಹಿಳೆಗೆ ಅರಿವಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JNNCE-Admission-Advt-scaled

Hotel Review

Online-Fraud-Case-image

Leave a Comment