ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಅಕ್ಟೋಬರ್ 2020
ಶಿವಮೊಗ್ಗದಲ್ಲಿ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿದೆ.
ದೇವಸ್ಥಾನದಲ್ಲಿ ಕಳ್ಳತನ
ಆರ್.ಎಂ.ಎಲ್.ನಗರದ ಶ್ರೀ ಶನೇಶ್ಚರ ದೇವ್ಥಾನದ ಶಟರ್ ಮುರಿದು ಕಳ್ಳತನ ಮಾಡಲಾಗಿದೆ. ದೇವರ ಹುಂಡಿ, ದೇವರಿಗೆ ತೊಡಿಸಿದ್ದ ಬೆಳ್ಳಿ ಆಭರಣಗಳು ಕಳ್ಳತನ ಮಾಡಲಾಗಿದೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯಲ್ಲಿ ಕಳ್ಳತನ
ಅಜಾದ್ ನಗರದ ಮೂರನೇ ತಿರುವಿನಲ್ಲಿ ಮನೆಗೆ ಕನ್ನ ಹಾಕಿರುವ ಕಳ್ಳರು, ಎರಡು ಬಂಗಾರದ ಉಂಗುರ, ತಾಮ್ರದ ಹಂಡೆ ಹಾಗೂ ಚೊಂಬು ಕದ್ದೊಯ್ದಿದ್ದಾರೆ. ಅಬ್ದುಲ್ ರಶೀದ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಬ್ದುಲ್ ರಶೀದ್ ಅವರ ಪತ್ನಿಗೆ ಹುಷಾರಿಲ್ಲದ ಕಾರಣ ಮಂಜುನಾಥ ಬಡಾವಣೆಯಲ್ಲಿ ಇರುವ ಮಾವನ ಮನೆಯಲ್ಲಿದ್ದರು. ಅಲ್ಲಿಯೇ ಪತ್ನಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಅವರು ಮಾವನ ಮನೆಗೆ ಹೋದಾಗ ಕಳ್ಳತನವಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422