ಟ್ರಾಫಿಕ್‌ ಚಲನ್‌ APK ಫೈಲ್‌, ಓಪನ್‌ ಮಾಡಿದರೆ ಏನಾಗುತ್ತೆ? ಇಲ್ಲಿದೆ ಉದಾಹರಣೆ

ಶಿವಮೊಗ್ಗ: ಆರ್‌ಟಿಒ ಇ-ಚಲನ್ (traffic challan) ಹೆಸರಿನಲ್ಲಿ ವಾಟ್ಸ್‌ಆ್ಯಪ್‌ಗೆ ಬಂದ ನಕಲಿ ಎಪಿಕೆ (APK) ಫೈಲ್ ಮೇಲೆ ಕ್ಲಿಕ್‌ ಮಾಡಿದ ವ್ಯಕ್ತಿಯೊಬ್ಬರು ₹4,34,507 ಹಣ ಕಳೆದುಕೊಂಡಿದ್ದಾರೆ. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಸಾಗರದ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿದ್ದಾರೆ. ಕಳೆದ ಏಪ್ರಿಲ್ 29ರಂದು ಸಾಗರದ ವ್ಯಕ್ತಿ ವಾಟ್ಸ್‌ಆ್ಯಪ್‌ಗೆ RTO E-challan ಹೆಸರಿನ ಎಪಿಕೆ ಫೈಲ್ ಬಂದಿತ್ತು. ಅದನ್ನು ಅವರು ಓಪನ್ ಮಾಡಿದಾಗ ಒಂದು ಅಪ್ಲಿಕೇಶನ್ ಡೌನ್‌ಲೋಡ್ ಆಗಿತ್ತು. ಸಾಗರದ ವ್ಯಕ್ತಿಯು ಅದರಲ್ಲಿ ತಮ್ಮ ಕೆವೈಸಿ (KYC) ಮಾಹಿತಿ ಭರ್ತಿ ಮಾಡಿದ್ದರು. ಆದರೆ ಅದರಲ್ಲಿ ಯಾವುದೇ ಮಾಹಿತಿ ಪ್ರದರ್ಶನವಾಗದ ಹಿನ್ನೆಲೆ ಅವರು ಆ್ಯಪ್‌ನಿಂದ ಹೊರಗೆ ಬಂದಿದ್ದರು.

Shivamogga-CEN-Police-Station

Shivamogga-CEN-Police-Station

ಈಚೆಗೆ ಸಾಗರದ ವ್ಯಕ್ತಿ ತಮ್ಮ ಮೊಬೈಲ್ ಚೆಕ್ ಮಾಡಿದಾಗ ಹಣ ಕಡಿತವಾದ ಮೆಸೇಜುಗಳಿದ್ದವು. ಯೂನಿಯನ್ ಬ್ಯಾಂಕ್ ಖಾತೆಯಿಂದ ₹4,09,317 ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ₹25,189 ಸೇರಿದಂತೆ ಒಟ್ಟು ₹4,34,507 ಹಣ ಹಂತ ಹಂತವಾಗಿ ಕಡಿತವಾಗಿರುವ ಸಂದೇಶಗಳಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಅವರು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಆನ್‌ಲೈನ್ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕಂಪ್ಲೇಂಟ್‌ ದಾಖಲಾಗಿ 6 ಗಂಟೆಯಲ್ಲಿ ಕಳ್ಳ ಅಂದರ್‌, ಲಕ್ಷ ಲಕ್ಷದ ಚಿನ್ನಾಭರಣ ವಶಕ್ಕೆ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು