ಶಿವಮೊಗ್ಗ: ನವುಲೆ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ (wedding hall thieves) ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಅತಿಥಿಗಳ ಕೊಠಡಿಯಿಂದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳನ್ನು ವಿನೋಬನಗರ ಪೊಲೀಸರು ಕೇವಲ 6 ಗಂಟೆಯೊಳಗೆ ಬಂಧಿಸಿದ್ದಾರೆ.
ಮದುವೆ ಕಾರ್ಯಕ್ರಮದ ವೇಳೆ ರೂಮ್‌ಗಳಲ್ಲಿ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 28 ಗ್ರಾಂ ತೂಕದ ಬಂಗಾರದ ಆಭರಣಗಳು ಕಳವಾಗಿದ್ದವು. ಈ ಬಗ್ಗೆ ತೇವರ ಚಟ್ನಹಳ್ಳಿ ಗ್ರಾಮದ ಸದಾಶಿವಪ್ಪ ಅವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು.

6 ಗಂಟೆಯಲ್ಲಿ ಆರೋಪಿ ಅರೆಸ್ಟ್
ಪಿಎಸ್‌ಐ ತಿರುಮಲೇಶ್.ಜಿ ಮತ್ತು ಸಿಬ್ಬಂದಿಯ ತಂಡವು ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಾದ ಕೇವಲ 6 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಶರಾವತಿ ನಗರದ ನಿವಾಸಿ ಅಮ್ಜದ್ ಖಾನ್ ಅಲಿಯಾಸ್ ಅಂಜು (29) ಎಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏನೇನೆಲ್ಲ ವಶಕ್ಕೆ ಪಡೆಯಲಾಗಿದೆ?
ಬಂಧಿತರಿಂದ ₹3,75,000 ಮೌಲ್ಯದ 24 ಗ್ರಾಂ ಚಿನ್ನದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ₹2,10,000 ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹5,85,000 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ : ಗೋದಾಮಿನ ಬೀಗ ತೆಗೆದು ಒಳ ಹೋದ ವ್ಯಾಪಾರಿಗೆ ಆಘಾತ, 8 ಮೂಟೆ ಅಡಿಕೆ ನಾಪತ್ತೆ, ಆಗಿದ್ದೇನು?
ಡಿವೈಎಸ್‌ಪಿ ಸಂಜೀವ್ ಕುಮಾರ್.ಟಿ.ಡಿ ಮಾರ್ಗದರ್ಶನದಲ್ಲಿ, ವಿನೋಬನಗರ ಇನ್ಸ್‌ಪೆಕ್ಟ್ ಸುರೇಶ್ ಅವರ ಉಸ್ತುವಾರಿಯಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್‌ಐ ತಿರುಮಲೇಶ್.ಜಿ, ಸಿಬ್ಬಂದಿ ರಾಜು.ಕೆ.ಆರ್, ಚಂದ್ರಾನಾಯ್ಕ.ಬಿ, ಮಲ್ಲಪ್ಪ.ಎಸ್.ಜಿ, ಅರುಣಕುಮಾರ್.ಎನ್.ಕೆ, ಮನುಶಂಕರ ತಂಡ ಆರೋಪಿಯನ್ನು ಬಂಧಿಸಿದೆ.
