ಶಿವಮೊಗ್ಗದಲ್ಲಿ ಒಂದೇ ಬೈಕ್‌ಗೆ ಮಾರುದ್ದದ ದಂಡದ ಬಿಲ್‌, ಆಟೋಗೆ ಚಾಲಕನಿಗು ಶಾಕ್‌, ಕಟ್ಟಿದ ಫೈನ್‌ ಎಷ್ಟು?

SHIVAMOGGA LIVE NEWS | 4 JANUARY 2024

SHIMOGA : ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪ್ರಯೋಗ ಮುಂದುವರೆದಿದೆ. ಬೈಕ್‌ ಮಾಲೀಕನೊಬ್ಬನಿಗೆ ಒಂದೂವರೆ ಮೀಟರ್‌ ಉದ್ದದ ಬಿಲ್‌ ನೀಡಿದ್ದ ಸಂಚಾರ ಠಾಣೆ ಪೊಲೀಸರು ಈಗ ಅದಕ್ಕಿಂತಲೂ ದೊಡ್ಡ ದಂಡದ ಬಿಲ್‌ ನೀಡಿದ್ದಾರೆ.

Traffic Police Shimoga

ಹಲವು ಸಂಚಾರ ನಿಯಮ ಉಲ್ಲಂಘಿಸಿದ್ದ ನಾಲ್ಕು ಬೈಕ್‌ ಮತ್ತು ಒಂದು ಆಟೋಗೆ ದೊಡ್ಡ ಬಿಲ್‌ ನೀಡಿದ್ದಾರೆ. 12 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಸ್ಕೂಟಿಗೆ 13,500 ರೂ., 13 ಬಾರಿ ಉಲ್ಲಂಘನೆಗೆ ಪ್ಯಾಷನ್‌ ಪ್ರೋ ಬೈಕ್‌ಗೆ 13 ಸಾವಿರ ರೂ. ದಂಡ, ಆಟೋಗೆ 9 ಸಾವಿರ ರೂ. ದಂಡ ವಿಧಿಸಲಾಗಿದೆ. 42 ಸಂಚಾರ ನಿಯಮ ಉಲ್ಲಂಘನೆಗಾಗಿ ಐದು ವಾಹನದಿಂದ ಒಟ್ಟು 46,500 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಂತೆ ವಾಹನಗಳ ವಿರುದ್ಧ ಪ್ರಕರಣ ದಾಖಲಾಗುತ್ತಿವೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಂದೇ ಬೈಕ್‌ಗೆ ಒಂದೂವರೆ ಮೀಟರ್‌ಗಿಂತಲೂ ಹೆಚ್ಚು ಉದ್ದದ ದಂಡದ ಬಿಲ್‌, ಫೈನ್‌ ಮೊತ್ತ ಎಷ್ಟು?

Kalleshwara-Enterprises.webp

ಪಿಎಸ್‌ಐ ತಿರುಮಲೇಶ್‌, ಎಎಸ್‌ಐ ಮೋಹನ್‌, ಎಎಸ್‌ಐ ಕೃಷ್ಣಪ್ಪ, ಸಿಬ್ಬಂದಿ ನಾಸೀರ್‌ ಅಹಮ್ಮದ್‌, ಸಂದೀಪ್‌, ಪ್ರಕಾಶ್‌, ಪ್ರಶಾಂತ್‌ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment