ಶಿವಮೊಗ್ಗ : ರಸ್ತೆಯ ಡಿವೈಡರ್ ಮೇಲೆ ಸಂಚಾರ ಪೊಲೀಸ್ ಸಿಬ್ಬಂದಿ ನಿಂತಿರುವಂತಿದ್ದ ರಿಫ್ಲೆಕ್ಟರ್ ಕಟೌಟ್ (Cut Out) ಅನ್ನು ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ರಿಫ್ಲೆಕ್ಟರ್ ಕಟೌಟ್ ಕಳವು ಮಾಡಿದ್ದಾರೆ. ಇದು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಿವಮೊಗ್ಗದ ಸಾಗರ ರಸ್ತೆಯ ಮಹೇಂದ್ರ ಶೋ ರೂಂ ಮುಂಭಾಗ, ಪೊಲೀಸ್ ಸಿಬ್ಬಂದಿಯೊಬ್ಬರು ನಿಧಾನವಾಗಿ ಚಲಿಸಿ ಎಂಬ ಬೋರ್ಡ್ ಹಿಡಿದು ನಿಂತಿರುವಂತಹ ರಿಫ್ಲೆಕ್ಟರ್ ಕಟೌಟ್ (Cut Out) ಹಾಕಲಾಗಿತ್ತು. ಮಾ.16ರ ರಾತ್ರಿ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಈ ರಿಫ್ಲೆಕ್ಟರ್ ಕದ್ದೊಯ್ದಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಿಫ್ಲೆಕ್ಟರ್ ಕಟೌಟ್ ಕಳ್ಳತನ ಮಾಡಿರುವುದು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ 2.13 ರಿಂದ 2.20ರ ಮಧ್ಯೆ ಕೃತ್ಯ ನಡೆದಿದೆ. ಮೂರು ತಿಂಗಳ ಹಿಂದೆ ಸಂಚಾರ ಪೊಲೀಸರು ಇಲ್ಲಿ ರಿಫ್ಲೆಕ್ಟರ್ ಕಟೌಟ್ ಅಳವಡಿಸಿದ್ದರು.
ಸಾರ್ವಜನಿಕ ಆಸ್ತಿ ಹಾನಿ ಕೇಸ್
ಅತಿ ವೇಗದಿಂದ ಅಪಘಾತ ಸಂಭವಿಸುವ ವಿವಿಧೆಡೆ ಸಂಚಾರ ಪೊಲೀಸರು ಸಿಬ್ಬಂದಿಯೊಬ್ಬರನ್ನು ಹೋಲುವ ರಿಫ್ಲೆಕ್ಟರ್ ಕಟೌಟ್ ಅಳವಡಿಸಿದ್ದರು. ಈ ರಿಫ್ಲೆಕ್ಟರ್ ಕಟೌಟ್ ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಈಗ ಸಾರ್ವಜನಿಕ ಆಸ್ತಿ ಹಾನಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಆರೋಪ ಸಾಬೀತಾದರೆ ಜೈಲು ಶಿಕ್ಷೆ ಒಳಗಾಗಬೇಕಾಗುತ್ತದೆ.
ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೈಕಿನಲ್ಲಿ ಅಕ್ಕಿ ಮೂಟೆ ಇಟ್ಟುಕೊಂಡು ಹೋಗುವಾಗ ಅಪಘಾತ, ಕೇರಳದ ವ್ಯಕ್ತಿ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200