ರೈಲು ಡಿಕ್ಕಿಯಾಗಿ ಯುವಕ ಸಾವು, ರೈಲ್ವೆ ಪೊಲೀಸರಿಂದ ಮಹತ್ವದ ಪ್ರಕಟಣೆ

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ (Railway Station) ಯಾರ್ಡ್ ವ್ಯಾಪ್ತಿಯಲ್ಲಿ ರೈಲು ಡಿಕ್ಕಿಯಾಗಿ (Train accident) 20 ರಿಂದ 25 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿ 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಕಪ್ಪು ಗುಂಗುರು ಕೂದಲು ಹೊಂದಿದ್ದಾನೆ. ಕೆಂಪು ಬಣ್ಣದ ಅರ್ಧ ತೋಳಿನ ಟೀ-ಶರ್ಟ್ (T-shirt), ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಎಡಗೈಯಲ್ಲಿ ಕಡಗವಿದೆ. ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ (Railway Police Station) ಪ್ರಕರಣ ದಾಖಲಾಗಿದೆ.

Train-at-Shivamogga-Railway-Station.

ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಅಥವಾ ವಾರಸುದಾರರು ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (Sub-Inspector) ಅಥವಾ ದೂ.08182-222974, ಮೊ.94808 02124 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. (ಮೃತ ವ್ಯಕ್ತಿಯ ಫೋಟೊ ಬಳಸಲು ಆಗದ ಸ್ಥಿತಿಯಲ್ಲಿದೆ)

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 11, 2026 at 8:40 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 11, 2026