ಶಿವಮೊಗ್ಗ KSRTC ಬಸ್ ನಿಲ್ದಾಣದ ಹಿಂಭಾಗ ಪೊಲೀಸರ ದಾಳಿ, ಇಬ್ಬರು ಅರೆಸ್ಟ್, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS |  4 ಜನವರಿ 2022

ಶಿವಮೊಗ್ಗ KSRTC ಬಸ್ ನಿಲ್ದಾಣದ ಹಿಂಭಾಗದ ಖಾಲಿ ಜಾಗವೊಂದರಲ್ಲಿ ಕುಳಿತಿದ್ದ ಇಬ್ಬರು ಯುವಕರ ಮೇಲೆ, ಪೊಲೀಸರು ದಾಳಿ ನಡೆಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದು ದೃಢವಾದ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

AVvXsEichXaELYeDOhFU0n9XstiInpkhsI4y9y5uB VImqATyx1h3CLRA4zsRrFRxoiVo U462f0MYCBVD

ಬುದ್ಧ ನಗರದ ಖಾಲಿ ಜಾಗದಲ್ಲಿ ದಾಳಿ ನಡೆಸಿದ ಪೊಲೀಸರು, ಆಸೀಫ್ ಅಲಿಯಾಸ್ ಪೋಕ್ಲೈನ್ (21), ರೋಷನ್ ಜಮೀರ್ (24) ಎಂಬುವವರನ್ನು ಬಂಧಿಸಿದ್ದಾರೆ.

ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಈ ಯುವಕರು ಖಾಲಿ ಜಾಗದಲ್ಲಿ ಕುಳಿತಿದ್ದರು. ಅನುಮಾನದ ಮೇರೆಗೆ ವಿಚಾರಣೆ ಮಾಡಿದಾಗ, ಮಾದಕ ವಸ್ತು ಸೇವನೆ ಮಾಡಿರುವಂತೆ ಕಂಡು ಬಂದಿದೆ. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಇಬ್ಬರು ಗಾಂಜಾ ಸೇವನೆ ಮಾಡಿರುವುದ ದೃಢಪಟ್ಟಿದೆ.

ಇಬ್ಬರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ABOUT ME DECEMBER REPORT

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment