ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | ANAVATTI NEWS | 18 ಜನವರಿ 2022
ಬಂಗಾರದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ವಂಚನೆ ಮಾಡಿದ್ದ ಇಬ್ಬರನ್ನು ಆನವಟ್ಟಿ ಪೊಲೀಸರು ಬಂಧಿಸಿದ್ದು 4.22 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.
ಅನವಟ್ಟಿ ಸಮೀಪದ ತಿಮ್ಲಾಪುರ ಗ್ರಾಮದ ಕೆ.ರಾಮಪ್ಪ (44) ಮತ್ತು ಶಿಕಾರಿಪುರ ತಾಲೂಕಿನ ಬನ್ನೂರು ಗ್ರಾಮದ ತಿಮ್ಮಪ್ಪ (65) ಬಂಧಿತರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದ ಎಚ್.ಕೆ.ಚಂದ್ರಶೇಖರ್ ಮೋಸ ಹೋಗಿದ್ದವರು.
ವಂಚನೆ ಮಾಡಿದ್ದು ಹೇಗೆ?
2021ರ ಡಿಸೆಂಬರ್ನಲ್ಲಿ ಚಂದ್ರಶೇಖರ್ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿದ್ದ ಇಬ್ಬರೂ ರಘು ಮತ್ತು ಕೃಷ್ಣ ಎಂದು ಪರಿಚಯಿಸಿಕೊಂಡಿದ್ದರು. ಗ್ರಾಮದಲ್ಲಿ ಪರಿಚಯಸ್ಥರೊಬ್ಬರು ಮನೆ ಪಾಯ ತೆಗೆಯುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವರಿಗೆ ತುರ್ತು ಹಣದ ಅವಶ್ಯಕತೆ ಇದೆ. ನಾಲ್ಕುವರೆ ಕೆಜಿಯಷ್ಟು ನಾಣ್ಯಗಳು ಸಿಕ್ಕಿದ್ದು ಒಂದು ಕೆಜಿಗೆ 10 ಲಕ್ಷ ರೂ. ಆಗಲಿದೆ. ನಿಮಗೆ ಮುಕ್ಕಾಲು ಕೆಜಿ ನಾಣ್ಯಗಳನ್ನು ಕೇವಲ 5 ಲಕ್ಷ ರೂ.ಗೆ ಕೊಡಿಸುವುದಾಗಿ ನಂಬಿಸಿದ್ದರು.
ಅದರಂತೆ ಜ.4ರಂದು ಆನವಟ್ಟಿ ಬಸ್ ನಿಲ್ದಾಣದ ಹತ್ತಿರ ಬರುವಂತೆ ಹೇಳಿದ್ದರು. ಅರ್ಧ ಕೆಜಿಯಷ್ಟು ನಾಣ್ಯಗಳನ್ನು ಕೊಟ್ಟು 5 ಲಕ್ಷ ರೂ. ಪಡೆದು ಕಳುಹಿಸಿದ್ದರು. ಸ್ವಗ್ರಾಮಕ್ಕೆ ತೆರಳಿದ ಬಳಿಕ ನಾಣ್ಯಗಳು ನಕಲಿ ಎಂಬುದು ಖಚಿತಗೊಂಡ ಚಂದ್ರಶೇಖರ್ ಅವರು, ಈ ಬಗ್ಗೆ ಜ.7ರಂದು ಆನವಟ್ಟಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422