ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 MAY 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಹಳೆ ಶಿವಮೊಗ್ಗ ಭಾಗದಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕುಗಳು, ಆಟೋದ ಗಾಜು ಒಡೆದು, ಹಾನಿಗೊಳಿಸಿದ ಆರೋಪದ ಮೇಲೆ ಸೂಳೆಬೈಲಿನ ಮಹಮ್ಮದ್ ಸಲೀಂ (30) ಮತ್ತು ಭರ್ಮಪ್ಪನಗರದ ಅಕ್ರಿ ಖಾನ್ (32) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | ಕಾರು ಗಾಜು ಪುಡಿ ಪುಡಿ ಮಾಡುವ ಸಿಸಿಟಿವಿ ವಿಡಿಯೋ ವೈರಲ್, ಇಬ್ಬರು ದುಷ್ಕರ್ಮಿಗಳು ಅರೆಸ್ಟ್
ಸಿದ್ದಯ್ಯ ರಸ್ತೆ, ಭರ್ಮಪ್ಪನಗರದಲ್ಲಿ 18 ವಾಹನಗಳನ್ನು ಜಖಂ ಮಾಡಲಾಗಿತ್ತು. ಘಟನೆಯಾದ ಬಳಿಕ ಶಾಹಿಲ್ ಖಾನ್ ಮತ್ತು ಮನ್ಸೂರ್ ಅಹಮದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಈಗ ತಲೆ ಮರೆಸಿಕೊಂಡಿದ್ದ ಮತ್ತಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ಹಿಂದೆ ಇನ್ನು ಯಾರೆಲ್ಲರ ಕೈವಾಡ ಇದೆ ಎಂದು ತನಿಖೆ ನಡಸಲಾಗುತ್ತಿದೆ.
ಇದನ್ನೂ ಓದಿ | ‘ಇದು ಮುಸ್ಲಿಂ ಗೂಂಡಾಗಳ ಕೃತ್ಯ, ಅಶಾಂತಿ ಉಂಟು ಮಾಡುವುದೆ ಇವರ ಧ್ಯೇಯ’, ಗಂಭೀರ ಆರೋಪ
ಈಗ ಬಂಧಿತರಾಗಿರುವ ಅಕ್ರಿ ಖಾನ್ ಮತ್ತು ಮಹಮ್ಮದ್ ಸಲೀಂಗೆ ಅಪರಾಧ ಹಿನ್ನೆಲೆ ಇದೆ. ಇವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಸಂಬಂಧ ಪೊಲೀಸರು ಚಿಂತಿಸಿದ್ದಾರೆ.
ಇದನ್ನೂ ಓದಿ | ಶಿವಮೊಗ್ಗ ಗಾಂಧಿ ಬಜಾರ್ ಸುತ್ತಮುತ್ತ ಮನೆ ಮುಂದೆ ನಿಲ್ಲಿಸಿದ್ದ ಸಾಲು ಸಾಲು ಕಾರುಗಳ ಗ್ಲಾಸ್ ಪೀಸ್ ಪೀಸ್
ವಾಹನಗಳಿಗೆ ಹಾನಿಯಾದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇನ್ನು, ದುಷ್ಕರ್ಮಿಗಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೊಡ್ಡಪೇಟೆ ಮತ್ತು ಕೋಟೆ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]