ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಬಿಸ್ಕೇಟ್ ಪ್ಯಾಕೆಟ್ನಲ್ಲಿ (Biscuit Packet) ಗೌಪ್ಯವಾಗಿ ಗಾಂಜಾ, ಸಿಗರೇಟ್ ಇರಿಸಿ ವಿಚಾರಣಾಧೀನ ಖೈದಿಗೆ ನೀಡಲು ಬಂದಿದ್ದ ಮೂವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ವಿಚಾರಣಾಧೀನ ಖೈದಿ ಮಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನನ್ನು ಮಾತನಾಡಿಸಲು ಭದ್ರಾವತಿ ನಿವಾಸಿಗಳಾದ ರಾಹಿಲ್ (19) ಮತ್ತು ತಸೀರುಲ್ಲಾ (19) ಎಂಬುವವರು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಮಹಮ್ಮದ್ ಗೌಸ್ಗೆ ನೀಡಲು ಮೂರು ಪ್ಯಾಕೆಟ್ ಬಿಸ್ಕೇಟ್ ತಂದಿದ್ದರು.
ಜೈಲು ಭದ್ರತೆಗೆ ಕೆಎಸ್ಐಎಸ್ಎಫ್ ಪಡೆ ಸಿಬ್ಬಂದಿ ಬಿಸ್ಕೇಟ್ ಪ್ಯಾಕೆಟ್ ಪರಿಶೀಲಿಸಿದಾಗ ಒಳಗೆ ಗಮ್ ಟೇಪ್ನಲ್ಲಿ ಸುತ್ತಿದ್ದ ವಸ್ತುಗಳು ಸಿಕ್ಕಿವೆ. ಪರಿಶೀಲಿಸಿದಾಗ ಒಂದು ಪ್ಯಾಕೆಟ್ನಲ್ಲಿ ಗಾಂಜಾ, ಮತ್ತೊಂದರಲ್ಲಿ ಸಿಗರೇಟ್ಗಳು ಲಭ್ಯವಾಗಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದ ಉದ್ಯಮಿಯ ಖಾತೆಗೆ ಪ್ರತಿ ದಿನ ₹200 ಹಣ ಬಂತು, 60 ದಿನ ಆದ್ಮೇಲೆ ಕಾದಿತ್ತು ಆಘಾತ, ಆಗಿದ್ದೇನು?
Biscuit Packet





